ಪಾವಂಜೆ ಯಲ್ಲಿ ತುಳುನಾಡ ಕೃಷಿ ಜನಪದೋತ್ಸವ

4:34 PM, Monday, July 15th, 2013
Share
1 Star2 Stars3 Stars4 Stars5 Stars
(0 rating, 5 votes)
Loading...

tulunad krishiಮಂಗಳೂರು : ಪಾವಂಜೆ ಶ್ರೀ ಜನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಅಯೋಜಿಸಲಾದ  ತುಳುನಾಡ ಕೃಷಿ ಜನಪದೋತ್ಸವದ ಉದ್ಘಾಟನೆಯನ್ನು ಶನಿವಾರ ಉದ್ಯಮಿ ರಘುನಾಥ ಸೋಮಯಾಜಿ ಅವರು ನೆರವೇರಿಸಿದರು.

ಪಾವಂಜೆ ಯಲ್ಲಿ ಎರಡು ದಿನಗಳ ಕಾಲ ನಡೆಯುವ  4ನೇ ವರ್ಷದ ಜನಪದೋತ್ಸವದ ಉದ್ಘಾಟನೆ ಬಳಿಕ ಮಾತನಾಡಿದ ಅವರು ಮಣ್ಣಿನ ಹಾಗೂ ಕೆಸರಿನ ಬಗ್ಗೆ ಯುವಜನರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಸಮಾಜ ಕಟ್ಟಲು ಕೆಸರುಗದ್ದೆ ಪ್ರೇರಣೆಕೊಡುತ್ತದೆ ಎಂದು ಸೋಮಯಾಜಿ ತಿಳಿಸಿದರು.

ಕೊಯ್‌ಕುಡೆ ಹರಿಪಾದೆಯ ಸಾಂಪ್ರಾದಾಯಿಕ ಹಿರಿಯ ಕೃಷಿಕ ಕುಟ್ಟಿ.ಕೆ.ಪೂಜಾರಿ ಅವರು ಕೆಸರು ಗದ್ದೆ ಅಟೋಟ ಸ್ಫರ್ಧೆಗೆ ಚಾಲನೆ ನೀಡಿದರು. ಚಿಕ್ಕ ಮಂಗಳೂರು ವೇದ ವಿಜ್ನಾನ ಮಂದಿರದ ಮುಖ್ಯಸ್ಥರಾದ ಕೆ.ಎಸ್.ನಿತ್ಯಾನಂದ ಸ್ವಾಮಿ ಅವರು ಅಶೀರ್ವದಿಸಿದರು. ಮುಲ್ಕಿ ಅರಸು ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ನಿಧಿ ಶೋಧ, ಮೂರು ಕಾಲಿನ ಓಟ, ಹಿಮುಖ ಓಟ, ತುಳು ಪಾಡ್ಧನಾ, ಪ್ರಬಂಧ ಮುಂತಾದ ವಿವಿಧ ಸ್ಫರ್ಧೆಗಳಲ್ಲಿ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳ ಸುಮಾರು 2500ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English