ಮಂಗಳೂರು: ಅಜ್ಜಿಯ ಬಟ್ಟೆಯನ್ನು ಬಲವಂತದಿಂದ ಬಿಚ್ಚಿಸಿ ವಿವಸ್ತ್ರ ಗೊಳಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಸರಿಪಲ್ಲ ನಿವಾಸಿ ಮೇರಿ ಡಿ’ಸೋಜಾ (69)ರ ಮನೆಗೆ ನುಗ್ಗಿದ ಚಿಕ್ಕಬಳ್ಳಾ ಪುರ-ಚಿಂತಾಮಣಿ ನಿವಾಸಿ ನಾಗೇಶ(24) ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿ ದಂತೆ ಬೆಲೆಬಾಳುವ ಸೊತ್ತುಗಳನ್ನು ದೋಚಿದ್ದ.
ಅಜ್ಜಿಗೆ ಚೂರಿ ತೋರಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಬಳಿಕ ಅಜ್ಜಿ ಕೂಗಿಕೊಂಡರು, ಆಗ ಸರಿಪಲ್ಲದ ಯುವಕರು ಓಡಿಬಂದರು,
ಯವಕರನ್ನು ಕಂಡಾಗ ನಾಗೇಶ ಮನೆಯ ಹಿಂಬದಿಯ ಪೊದೆಯಲ್ಲಿ ಅಡಗಿ ಕುಳಿತಿದ್ದ. ಯುವಕರನ್ನು ನೋಡುತ್ತಲೇ ಚಿನ್ನಾಭರಣವನ್ನು ಪಕ್ಕಕ್ಕೆ ಎಸೆದು ಓಡಲಾರಂಭಿಸಿದ. ಯುವಕರು ನಾಗೇಶನನ್ನು ಬೆಂಬತ್ತಿ ಹಿಡಿದರು.
ಬಳಿಕ ಯುವಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ನಿನ್ನೆ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Click this button or press Ctrl+G to toggle between Kannada and English