ಮಂಗಳೂರು : ನಾಳೆ ಎರಡು ಜಿಲ್ಲೆಗಳಲ್ಲಿ ಬಸ್ ಬಂದ್ ಇಲ್ಲ ಎಂದು ದ.ಕ ಜಿಲ್ಲಾ ಬಸ್ಸು ಮಾಲಕರು ತಿಳಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸ್ ಕಮಿಷನರಿಗೆ ಮನವಿ ಮಾಡಿದ ಬಸ್ಸು ಮಾಲಕರು ಬಂದ್ ಇಲ್ಲ ಎಂದು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ(ಜು.17) ಬಸ್ ಬಂದ್ ನಡೆಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಪ್ರಕಟನೆ ತಿಳಿಸಿತ್ತು.
ತಮ್ಮ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರು ಅನೇಕ ಬಾರಿ ಜಿಲ್ಲಾಡಳಿತ ಮತ್ತು ಮಾಲಕರಿಗೆ ಮನವಿ ಸಲ್ಲಿಸಿದರೂ ಇದನ್ನು ನಿರ್ಲಕ್ಷಿಸಲಾಗುತ್ತಿದೆ. ಬಂದ್ ಗೆ ನೌಕರ ವರ್ಗದ ಎಲ್ಲಾ ಸಂಘಟನೆಗಳು ಬೆಂಬಲ ಸೂಚಿಸಿದೆ ಎಂದು ಸಂಘದ ಅಧ್ಯಕ್ಷ ಐವನ್ ಡಿಸೋಜಾ ಹೇಳಿದ್ದಾರೆ.
ಇತ್ತ ಬಸ್ಸು ಮಾಲಕರು ನಾವು ನಮ್ಮ ನೌಕರರಿಗೆ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದೇವೆ. ದಿನ ಭತ್ಯೆ, ಸಂಭಳ ಸೇರಿ ದಿನಕ್ಕೆ ಒಂದು ಸಾವಿರದ ವರೆಗೆ ನೀಡುತ್ತಿದ್ದೇವೆ. ಸಿಬ್ಬಂದಿಗಳು ಅಫಘಾತ ಮಾಡಿ ಆರೆಸ್ಟ್ ಆದಾಗ ಮಾಲಕರು ಹೋಗಿ ಬಿಡಿಸುತ್ತಾರೆ. ಕಾರ್ಮಿಕರ ಯಾವುದೇ ಬೇಡಿಕೆಗಳಿದ್ದರು ಕುಳಿತು ಚರ್ಚಿಸ ಬಹುದು ಎಂದು ಮಾಲಕ ಜಯಶೀಲ ಅಡ್ಯಾಂತಾಯ ಹೇಳಿದರು.
ಇಂದು ಒಂದು ಕಡೆ ಕಾರ್ಮಿಕ ಸಂಘಟನೆ ಬಂದ್ ಪೋಸ್ಟರ್ ಅಂಟಿಸುತ್ತಿದ್ದರೆ, ಬಸ್ಸು ಮಾಲಕರ ಕಡೆಯವರು ಪೋಸ್ಟರ್ ತೆಗೆಯುತ್ತಿದ್ದರು.
Click this button or press Ctrl+G to toggle between Kannada and English