ಕ್ಯಾರಿ ಓವರ್ ಪದ್ಧತಿ ಜಾರಿಗೆ ತರಲು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

3:56 PM, Tuesday, July 16th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Polytechnic students protest ಮಂಗಳೂರು : ಪಾಲಿಟೆಕ್ನಿಕ್ ಸರ್ವಕಾಲೇಜು ಸಂಘದ ವತಿಯಿಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಯಾದ (ಕ್ಯಾರಿ ಓವರ್ ನಿಯಮ)ದ ಶೀಘ್ರ ಪರಿಹಾರಕ್ಕಾಗಿ ಜುಲೈ 16 ಮಂಗಳವಾರ ಬೆಳಿಗ್ಗೆ ಮಂಗಳೂರು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯ ನೇತೃತ್ವವನ್ನುವಹಿಸಿದ ಅಧ್ಯಕ್ಷರಾದ ರಮಿತ್ ಕುಮಾರ್  ವಿದ್ಯಾರ್ಥಿಗಳ ಪರ ಮಾತಾಡುತ್ತಾ ಹಿಂದಿನ ಸರಕಾರ ಹೊರಡಿಸಿದ ಆದೇಶದಲ್ಲಿ 2013-14ನ ಸಾಲಿನಿಂದ ಕಡ್ಡಾಯವಾಗಿ ಡಿಪ್ಲೋಮಾ ವಿದ್ಯಾರ್ಥಿಗಳು ಮೂರನೇ ಹಾಗೂ ಐದನೇ ಸೆಮಿಸ್ಟರ್  ಗಳಿಗೆ ಪ್ರವೇಶ ಪಡೆಯಲು 2009-10ನೇ ಸಾಲಿನಂತೆಯೇ ನಾಲ್ಕು ಅಥವಾ ಕಡಿಮೆ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಲ್ಲಿ ಮಾತ್ರ ಅವಕಾಶ ಹೊಂದಿರುತ್ತದೆ ಎಂದು  ಆದೇಶದಲ್ಲಿ ತಿಳಿಸಿರುವುದರಿಂದ  ಈ ಬಾರಿ 80% ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಬಿಳುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಮೌಲ್ಯ ಹೆಚ್ಚಿಸಲು ಹಿಂದಿನ ಸರಕಾರ ಈ ನಿರ್ಧಾರ ಕೈಗೊಂಡಿತ್ತು. ಇದರಿಂದ ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಮನಗಂಡು ಶೀಘ್ರ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಿದರು.

Polytechnic students protest ತಾಂತ್ರಿಕ  ಶಿಕ್ಷಣ  ನಿರ್ದೆಶಕರಿಗೆ ಕನಿಷ್ಟ 20 ವಿಷಯಗಳಲ್ಲಿ ಅನುತೀರ್ಣರಾಗಿದ್ದರೆ ಮಾತ್ರ ಅವಕಾಶ ಹೊಂದಬಹುದು ಎಂಬ ನಿಯಮವನ್ನು ಜಾರಿಗೆ ತರಬೇಕೇಂದು ಅಗ್ರಹಿಸಿ, ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ಸಮಯದಲ್ಲಿ ದಿಕ್ಷಿತ್, ಸಚಿನ್ ಬಂಗೇರ, ಅಶ್ವಿತ್. ಬಿ. ಶ್ರೀಲತ, ವಿನಯ ಎಚ್.ಜೆ. ಲೋಹಿತ್, ಕರಿಷ್ಮ.ಡಿ.ಉಳ್ಳಾಲ್, ಅಶ್ವಿತ್ ಕೊಟ್ಟಾರಿ, ಪ್ರಕಾಶ್ ಕೌಶಿಕ್, ಉತ್ತಮ್ ಆಳ್ವ, ಪ್ರತೀಕ್,ಜೆ.ಪಿ. ನಿತಿನ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English