ಮಂಗಳೂರು : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು ಉತ್ತರಾಖಂಡ ದಲ್ಲಿ ಪ್ರಕೃತಿ ವಿಕೋಪದಿಂದ ಕೇದಾರನಾಥ, ಉತ್ತರಕಾಶಿ ಹಾಗೂ ಇತರ ಪ್ರದೇಶಗಳಲ್ಲಿ ಅಪಾರ ಜನರು ಪ್ರಾಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿ, ಅಪಾರ ಆಸ್ತಿ ನಷ್ಟವಾಗಿರುವುದನ್ನು ಮನಗಂಡು ಮುಖ್ಯಮಂತ್ರಿಗಳ ಮೂಲಕ ಸಹಾಯಧನ ಚೆಕ್ಕನ್ನು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈರವರೊಂದಿಗೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರು ಮತ್ತು ನಿರ್ದೇಶಕರಾದ ಶ್ರೀ ಸೀತರಾಮ ರೈ ಸವಣೂರು, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಸುಚರಿತ ಶೆಟ್ಟಿ, ಶ್ರೀ ಪದ್ಮನಾಭ ಶೆಟ್ಟಿ ಅರ್ಕಜೆ ಮತ್ತು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಸಹಾಯಧನಡಾ: ಬಿ.ವಿ. ಸತ್ಯನಾರಾಯಣ ರವರು ಈ ದಿನಾಂಕ 16.07.2013ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ರೂ.10 ಲಕ್ಷಗಳ ಪ್ರಥಮ ಕಂತಿನ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಿರುತ್ತಾರೆ.
ಇದೇ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಒಕ್ಕೂಟದ ಅಧ್ಯಕ್ಷರು ಒಕ್ಕೂಟ ಕಾರ್ಯಾಚರಿಸುತ್ತಿರುವ ಡೈರಿ ಆವರಣದ ಸರ್ಕಾರಿ ಜಮೀನನ್ನು ಒಕ್ಕೂಟಕ್ಕೆ ಹಸ್ತಾಂತರಿಸಲು, ಮೇವು ಅಭಿವೃದ್ಧಿಗಾಗಿ ಕೊಯಿಲ ಫಾರಂ ಭೂಮಿಯನ್ನು ಒಕ್ಕೂಟಕ್ಕೆ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಲು ಹಾಗೂ ಒಕ್ಕೂಟವು ನೂತನವಾಗಿ ಸ್ಥಾಪಿಸಲಿರುವ ಫ್ಲೆಕ್ಸಿ ಪ್ಯಾಕ್ ಘಟಕಕ್ಕೆ ಸಹಾಯಧನ ಮಂಜೂರು ಮಾಡಲು ಮನವಿ ಸಲ್ಲಿಸಿತು.
Click this button or press Ctrl+G to toggle between Kannada and English