ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಐವನ್ ಡಿಸೋಜಾ ಅವರು ಬುಧವಾರ ನಗರದ ವುಡ್ ಲ್ಯಾಂಡ್ಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸುಮಾರು 18 ಬೇಡಿಕೆಗಳನ್ನು ಈಡೇರಿಸಲು ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಬಸ್ಸ್ ಕಾರ್ಮಿಕರು ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಲು ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡುತ್ತಿದ್ದರೂ. ಇದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಆದರೆ ಇಷ್ಟು ವರ್ಷಗಳಲ್ಲಿ ನಾವು ಬಂದ್ ನಡೆಸಿಲ್ಲ. ಬೇಡಿಕೆ ಈಡೇರಿಸಲು ಜು.17ರ್ಂದು ಬಂದ್ ನಡೆಸಲು ನಿರ್ಧರಿಸಲಾಯಿತು. ಆದರೆ ಜು.16ರಂದು ಸಂಜೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಸ್ ಬಂದ್ ವಾಪಸ್ ಪಡೆಯಲಾಯಿತು. ಬೇಡಿಕೆ ಈಡೇರಿಸಲು 9 ಜನರ ಸಮನ್ವಯ ಸಮಿತಿಯನ್ನು ರಚಿಸಲಾಯಿತು ಎಂದು ಐವನ್ ಡಿಸೋಜಾ ತಿಳಿಸಿದರು.
ಮಂಗಳೂರಿನ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಭುಧವಾರ ಬಸ್ ಸಿಬ್ಬಂದಿಗಳ 13 ಬೇಡಿಕೆಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. 18 ತಿಂಗಳಿಗಿಂತ ಹೆಚ್ಚು ಕಾರ್ಯ ನಿರ್ವಹಿಸಿರುವ ಚಾಲಕ,ನಿರ್ವಾಹಕ, ಕ್ಲೀನರ್ ಗಳಿಗೆ ಮಾಲಕರ ವತಿಯಿಂದ ಗುರುತಿನ ಚೀಟಿ, ಖಾಸಗಿ ಬಸ್ ಗಳಲ್ಲಿ ಇ ಟಿಕೆಟ್ ಸಿಸ್ಟಂ. ಪಿಂಚಣಿ ಯೋಜನೆ, ಚಾಲಕ,ನಿರ್ವಾಹಕರಿಗೆ ಸಮವಸ್ತ್ರ ಸಹಿತ ಹಲವಾರು ಬೇಡಿಕೆಗಳನ್ನು ಈಡೇರಿಸಲು ಮಾಲಕರು ಹಾಗೂ ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದಾರೆ ಎಂದು ಉಪಪೊಲೀಸ್ ಆಯುಕ್ತ ಧರ್ಮಯ್ಯ ಹೇಳಿದರು. ಅವರು ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
Click this button or press Ctrl+G to toggle between Kannada and English