ಹಿಂದೂ ಜನಜಾಗ್ರತಿ ಸಮಿತಿಯಿಂದ ಗುರುಪೂರ್ಣಿಮ ಮಹೋತ್ಸವ

8:48 PM, Thursday, July 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

Sanatanaಮಂಗಳೂರು : ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ದೇಶಾದಾದ್ಯಂತ ಗುರುಪೂರ್ಣಿಮ ಮಹೋತ್ಸವನ್ನು ಜುಲೈ 22 ರಂದು ಆಚರಿಸಲಾಗುವುದು. ಆ ಪ್ರಯುಕ್ತ ಅದೇ ದಿನ ಸಂಜೆ 4 ಗಂಟೆಗೆ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಶ್ರೀ ಗುರುಗಳಿಲ್ಲದೇ ಶಿಷ್ಯನಿಗೆ ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ ಅದುದರಿಂದ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ. ಗುರುಪೂರ್ಣಿಮ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪರಮ ಪೂಜ್ಯ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ ನಡೆಯಲಿದೆ. ಅಂದು ಸನಾತನಸಂಸ್ಥೆಯ ರಾಷ್ಟ್ರದ ಹಾಗೂ ಧರ್ಮದ ಕುರಿತಾದ ಕಾರ್ಯ ಹಾಗೂ ವೈಶಿಷ್ಟ್ಯಗಳು ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಆ ಕುರಿತಾದ ದಿಕ್ಕು ಈ ಬಗ್ಗೆ ಪ್ರಮುಖ ವಕ್ತಾರರ ಪ್ರಬೋಧನ್ಮಾಕ ಮಾರ್ಗದರ್ಶನ ಹಾಗೂ ಇನ್ನಿತರ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಹಾಗಾಗಿ ಕುಟುಂಬಸಮೇತ ಪಾಲ್ಗೊಂಡು ರಾಷ್ಟ್ರ ಹಾಗೂ ಧರ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಸನಾತನ ಸಂಸ್ಥೆಯ ಕು. ವಿಜಯಲಕ್ಷ್ಮಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೊಷ್ಠಿಯಲ್ಲಿ ಹೇಳಿದರು.

ಪತ್ರಿಕಾಘೊಷ್ಠಿಯಲ್ಲಿ ಶ್ರೀ.ಪ್ರಸನ್ನಕಾಮತ್, ಹಿಂದೂ ಜನಜಾಗ್ರತಿ ಸಮಿತಿ, ಶ್ರೀ ಚಂದ್ರಹಾಸ್, ಹಿಂದೂ ಜನಜಾಗ್ರತಿ ಸಮಿತಿ, ಸೌ.ಲೀಲಾವತಿ, ಸನಾತನ ಸಂಸ್ಥೆ ಇವರು ಉಪಸ್ಥಿತರಿದ್ದರು.

ಗುರುಪೂರ್ಣಿಮ ಮಹೋತ್ಸವ ಬಗ್ಗೆ ಮಾಹಿತಿಗಾಗಿ 07204082345ಕ್ಕೆ  ಸಂಪರ್ಕಿಸಬಹುದು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English