ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

5:59 PM, Friday, July 19th, 2013
Share
1 Star2 Stars3 Stars4 Stars5 Stars
(5 rating, 7 votes)
Loading...

University College Students’ Unionಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ.

ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ.
ಚುನಾವಣೆಯ ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿ ರಮೇಶ್ .ಕೆ, ನಗರ ಕಾರ್ಯದರ್ಶಿ ಯತೀಶ್ ಕುಮಾರ್. ಪಿ, ನಿಕಟಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರು ಪ್ರಸಾದ್, ತೇಜಸ್ಸು, ಯಶೋಧರ ಅಭಿನಂಧಿಸಿದರು.

ಎಬಿವಿಪಿಯ ಕಾರ್ಯಕರ್ತರು 26 ಸೀಟು ಪಡೆದಿರುವ ಪ್ರಯುಕ್ತ ನಗರದ ವಿವಿ ಕಾಲೇಜಿನಿಂದ ಎ.ಬಿ ಶೆಟ್ಟಿ ವೃತ್ತ, ಕ್ಲಾಕ್ ಟವರ್ ವೃತ್ತ, ಕೆ.ಎಸ್ ರಾವ್ ರಸ್ತೆಯ ಮೂಲಕ ನವ ಭಾರತ ವೃತ್ತ, ಪಿವಿಎಸ್ ವೃತ್ತ, ಬೆಸೇಂಟ್ ವೃತ್ತ, ಮಹಾನಗರ ಪಾಲಿಕೆಯ ಮೂಲಕ ಗೋಕರ್ಣನಾಥೇಶ್ವರ ಕಾಲೇಜು, ಲೇಡಿಹಿಲ್ ವೃತ್ತ, ಲಾಲ್ಭಾಗ್, ಬಂಟ್ಸ್ ಹಾಸ್ಟೆಲ್ ವೃತ್ತ, ಜ್ಯೋತಿ ವೃತ್ತದಿಂದ ಹಂಪನಕಟ್ಟೆಯ ತನಕ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿಯು ವಿದ್ಯಾರ್ಥಿಗಳು ಸಂಘದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಎಬಿವಿಪಿಯ ಪ್ರಕಟನೆ ತಿಳಿಸಿದೆ.

University College Students’ Union

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English