ಮಂಗಳೂರಿನಲ್ಲಿ ನವೆಂಬರ್ 14 ರಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

7:06 PM, Monday, November 8th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳೂರು : ಬೆಳ್ಳಿ ಸಾಕ್ಷಿ ಮತ್ತು ಬೆಳ್ಳಿ ಮಂಡಲ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಇದರ ವತಿಯಿಂದ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ  ನವೆಂಬರ್ 14 ರಿಂದ 17ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತಾದ ಪತ್ರಿಕಾಗೋಷ್ಟಿ ಇಂದು ಮಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲಿನಲ್ಲಿ ಮಧ್ಯಾಹ್ನ ನಡೆಯಿತು.
ಸಮಕಾಲೀನ ಸಮಾಜಿಕ ಸಂಗತಿಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದೃಶ್ಯಮಾಧ್ಯಮದ ಪ್ರಭಾವಿ ಅಂಗವಾದ ಚಲನಚಿತ್ರ ಮಾಧ್ಯಮವನ್ನು ಬಳಸಿಕೊಂಡು ಸಿನಿಮಾ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಿ ಸದಭಿರುಚಿಯ ಪ್ರೇಕ್ಷಕ ಸಮುದಾಯವನ್ನು ರೂಪಿಸಿ ಆ ಮೂಲಕ ಸಭ್ಯ ಸಮಾಜವೊಂದರ ರಚನೆಯನ್ನು ತಾತ್ವಿಕವಾಗಿ ರೂಪಿಸಬೇಕೆಂಬುದು ಕರ್ನಾಟಕ ಸರಕಾರದ ವತಿಯಿಂದ 2009 ರಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಪ್ರದರ್ಶಿಸುವುದು, ಸಿನಿಮಾ ರಸಗ್ರಹಣ ಶಿಬಿರಗಳನ್ನು ಏರ್ಪಡಿಸುವುದು ಇತ್ಯಾದಿ ಚಟುವಟಿಕೆಗಳನ್ನು ಅಕಾಡೆಮಿ ಹಮ್ಮಿಕೊಂಡು ಬಂದಿದೆ ಎಂದು ಬೆಳ್ಳಿ ಸಾಕ್ಷಿ ಮಂಡಲದ ಮುಖ್ಯಸ್ಥ ನಿತ್ಯಾನಂದ ಶೆಟ್ಟಿ ಹೇಳಿದರು.
ಈ ದಾರಿಯ ಮುಂದುವರಿದ ಭಾಗವಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಮಹಾನಗರಗಳಿಂದ ಆಚೆಗೂ ನಡೆಸುವ ಸಂಕಲ್ಪವನ್ನು ಅಕಾಡೆಮಿ ಹೊಂದಿದೆ, ಹಾಗಾಗಿ ಇದೇ ಮೊದಲಬಾರಿಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ನವೆಂಬರ್  8 ರಿಂದ  25 ರವರೆಗಿನ ಅವಧಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಚಲನಚಿತ್ರ ಅಕಾಡೆಮಿ ತನ್ನ ನೇತೃತ್ವದಲ್ಲಿರುವ ಸ್ಥಳೀಯ ಸಂಸ್ಥೆಗಳಾದ ಬೆಳ್ಳಿ ಸಾಕ್ಷಿ ಮತ್ತು ಬೆಳ್ಳಿ ಮಂಡಲಗಳ ಮೂಲಕ ಈ ಚಲನಚಿತ್ರೋತ್ಸವಗಳನ್ನು ಈ ವರ್ಷ ಮಂಗಳೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಂಗಳೂರಿನ ಚರಿತ್ರೆಯಲ್ಲೇ ಇದೇ ಮೊದಲಬಾರಿಗೆ ನಡೆಯಲಿರುವ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 14 ರಿಂದ 17ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ರವೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ನಡೆಯಲಿದೆ. ಈ ಚಲಚಿತ್ರೊತ್ಸವದ ಅಂಗವಾಗಿ ನವೆಂಬರ್ 14 ರಂದು ಪಾಂಡೇಶ್ವರದ ಭಾರತೀಯ ವಿದ್ಯಾಭವನದಲ್ಲಿ ಸಂಜೆ 4.00 ಕ್ಕೆ ಸರಿಯಾಗಿ ವಿಚಾರಸಂಕಿರಣವೊಂದನ್ನು ಹಮ್ಮಿಕೊಳ್ಳಲಾಗಿದ್ದು ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ. ವಿಲ್ಲಿ ಆರ್ ಡಿಸಿಲ್ವ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಅಭಯ್ ಸಿಂಹ ಇವರುಗಳು ‘ಸಿನಿಮಾ-ಸಾಮಾಜಿಕ ನಿರೂಪಣೆ’ ವಿಷಯದ ಮೇಲೆ ಮಾತನಾಡಲಿದ್ದಾರೆ ಎಂದು ಹಿಂದೂ ಪತ್ರಿಕೆಯ ಗೋವಿಂದ ಬೆಳಗಾಂವ್ಕರ್ ಹೇಳಿದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಈ ಚಲನಚಿತ್ರೋತ್ಸವಕ್ಕೆ ಪ್ರವೇಶವಕಾಶವನ್ನು ಪ್ರತಿನಿಧಿ ಪಾಸ್ಗಳ ಮೂಲಕ ಮಾತ್ರ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ರೂ. 50/- ಮತ್ತು ನಾಗರಿಕರಿಗೆ ರೂ. 100/- ನ್ನು ಪ್ರತಿನಿಧಿ ಶುಲ್ಕವಾಗಿ ನಿಗದಿಪಡಿಸಲಾಗಿದೆ. ಈ ಮೊತ್ತಕ್ಕೆ ಒಟ್ಟು ನಾಲ್ಕು ದಿನಗಳ ಕಾಲ 16 ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಆಸಕ್ತಿ ಇರುವ ಯಾವುದೇ ಒಂದು ಸಿನಿಮಾವನ್ನು ಅಥವಾ ಒಂದು ದಿನದ ಪ್ರದರ್ಶನಗಳನ್ನು ನೋಡಲು ಬಯಸುವವರು ರೂ 55/- ರ ಪ್ರತಿನಿಧಿ ಪಾಸ್ ಅನ್ನು ಡಾನ್ ಬೋಸ್ಕೋ ಸಭಾಂಗಣದಲ್ಲೇ ಪಡೆಯುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲಿ ಐವನ್ ಡಿ ಸಿಲ್ವ, ಪ್ರಕಾಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English