ಕುಡುಕ ಗಂಡನ ಬಿಟ್ಟು, ಮಗಳಿಗಾಗಿ ಒಳ್ಳೆಯ ತಂದೆಯನ್ನು ಮದುವೆಯಾದ ಯುವತಿ

7:13 PM, Friday, July 19th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Missing married womanವಿಟ್ಲ :  ವಿಟ್ಲಮುಡ್ನೂರು ಗ್ರಾಮದ ಹಲಸಿನಕಟ್ಟೆಯ ವಿಹಾಹಿತ ಯುವತಿ ನಳಿನಿ(23) ಮಂಗಳವಾರ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.  ಗುರುವಾರ ನಳಿನಿ ತನ್ನ ಸಂಬಂಧಿ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ.

ನಳಿನಿ ಮಂಗಳವಾರ ನೇರವಾಗಿ ಮನೆಬಿಟ್ಟು ತನ್ನ ಸಂಬಂಧಿ ಫರ್ನೀಚರ್ ಅಂಗಡಿ ಉದ್ಯೋಗಿ ಜಗದೀಶನ ಜತೆ  ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ. ಅಲ್ಲಿಂದ ಠಾಣೆಗೆ ಬಂದು ಆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ.

ತನ್ನ ಮಗಳ ಭವಿಷ್ಯಕ್ಕಾಗಿ ನಾನು ಬೇರೆ ವಿವಾಹವಾಗಿದ್ದೇನೆ. ತನ್ನ ಗಂಡ ರಾಜೇಶ್ ವಿಪರೀತ ಮದ್ಯ ಸೇವಿಸುತ್ತಿದ್ದು, ನನ್ನ ಮಗಳಿಗೆ ಒಳ್ಳೆಯ ತಂದೆ ಬೇಕೆಂಬ ಉದ್ದೇಶ ದಿಂದ ಈ ರೀತಿಯಾಗಿ ಮಾಡಿದ್ದೇನೆ. ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಜಗದೀಶ ಈಕೆಯ ಮನೆಗೆ ಆಗಾಗ ಬರುತ್ತಿದ್ದು, ಬಳಿಕ ಅವರ ನಡುವೆ ಪ್ರೇಮಾಂಕುರವಾಗಿತ್ತು. ಇದೇ ಪ್ರೇಮ ಅವರನ್ನು ದಂಪತಿಯನ್ನಾಗಿ ಮಾಡಿದೆ. ಜಗದೀಶನಿಗೆ ವಿಟ್ಲದಲ್ಲಿ ಫರ್ನೀಚರ್ ಅಂಗಡಿ ಇದೆ.

ಗುರುವಾರ ಸಂಜೆವರೆಗೂ ವಿಟ್ಲ ಠಾಣೆಯಲ್ಲಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಳಿನಿ ಕುಟುಂಬಿಕರು ಒಟ್ಟಾಗಿ ಈ ರೀತಿ ನನಗೆ ವಂಚನೆ ಮಾಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾನೆ. ಮದುವೆಯಾದ ಜಗದೀಶ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪೊಲೀಸರಲ್ಲಿ ಹೇಳಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English