ಎ.ಜೆ. ವೈದ್ಯಕೀಯ ವಿದ್ಯಾಲಯದಿಂದ ಬಂಜೆತನ ಶಿಬಿರ

1:10 PM, Saturday, July 20th, 2013
Share
1 Star2 Stars3 Stars4 Stars5 Stars
(5 rating, 4 votes)
Loading...

AJ Hospitalಮಂಗಳೂರು: ಎ.ಜೆ. ವೈದ್ಯಕೀಯ ವಿದ್ಯಾಲಯದ ಸ್ತ್ರೀರೋಗ ವಿಭಾಗದಿಂದ ಬಂಜೆತನ ಶಿಬಿರವನ್ನು ಜುಲೈ 22 ರಿಂದ ಅಗಸ್ಟ್ 3,2013ರ ವರೆಗೆ ಎ.ಜೆ. ವೈದ್ಯಕೀಯ ವಿದ್ಯಾಲಯದ ಹೊರರೋಗಿ ವಿಭಾಗದಲ್ಲಿ ಏರ್ಪಡಿಸಲಾಗಿದೆ.

ಈ ಶಿಬಿರದದಲ್ಲಿ ಉಚಿತ ವೈದ್ಯಕೀಯ ಸಲಹೆ, ರಕ್ತ ತಪಾಸನೆ ಮತ್ತು ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಎ.ಜೆ. ವೈದ್ಯಕೀಯ ವಿದ್ಯಾಲಯವು ಎ.ಜೆ.ಶೆಟ್ಟಿ ಅವರ ದೂರದರ್ಶಿತ್ವದಿಂದ 2002ರಲ್ಲಿ ಸ್ಥಾಪನೆಯಾಯಿತು. ಇದರ ಮುಖ್ಯಧ್ಯೇಯ  ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ, ಈ ವಿದ್ಯಾಲಯದ ಉಪಾಧ್ಯಕ್ಷ ಶ್ರೀ ಪ್ರಶಾಂತ್ ಶೆಟ್ಟಿ, ಡೀನ್ ಡಾ. ರಮೇಶ್ ಪೈ ಅವರ ನೇತ್ರತ್ವದಲ್ಲಿ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅದಲ್ಲದೆ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ,ಡಾ. ಶರ್ಮ ಹಾಗೂ ಅನುಭವಿ ವೈದ್ಯರ  ನೇತ್ರತ್ವದಲ್ಲಿ ಸಂತಾನಹೀನತೆ ಚಿಕಿತ್ಸೆ ಮಾಡುತ್ತಿದ್ದಾರೆ. ಈ ವಿಭಾಗವು ಹಲವು ಉಚಿತ ಸೇವಾ  ಶಿಬಿರಗಳನ್ನು ಅಯೋಜಿಸಿದೆ ಎಂದು ಡಾ.ಲತಾ ಶರ್ಮರವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೊಷ್ಢಿಯಲ್ಲಿ ತಿಳಿಸಿದರು.

ಪತ್ರಿಕಾಘೊಷ್ಢಿಯಲ್ಲಿ  ಡಾ.ವತ್ಸಾಂಕ ಕಾಮತ್ ಮತ್ತು ಬಾಸ್ಕರ್ ಅರಸ್ ಉಪಸ್ಥಿತರಿದ್ದರು.

ಆಸಕ್ತರು ತಮ್ಮ ಹೆಸರನ್ನು ನೊಂದಾಹಿಸಲು 0824-2225533 ವಿಸ್ತರಣೆ (433) ಅಥವಾ 9902942969ಕ್ಕೆ ಕರೆ ಮಾಡಬಹುದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English