ಒಬಾಮ ಭಾರತ ಭೇಟಿಯನ್ನು ವಿರೋಧಿಸಿ ಎಡಪಕ್ಷಗಳ ಪ್ರತಿಭಟನೆ

8:29 PM, Monday, November 8th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಎಡಪಕ್ಷಗಳ ಪ್ರತಿಭಟನೆಮಂಗಳೂರು : ಅಮೇರಿಕ ಸಂಯುಕ್ತ ಸಂಸ್ಥಾನದ  ಅದ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದನ್ನು ವಿರೋಧಿಸಿ ಸಿಪಿಐ(ಎಂ) ಸಿಪಿಐ, ಮತ್ತು ಆರ್ ಎಸ್ ಪಿ ಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಸಂಜೆ ಮಂಗಳೂರಿನಲ್ಲೂ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಯಿತು.

ಎಡಪಕ್ಷಗಳ ಪ್ರತಿಭಟನೆನವ-ಪ್ರತಿಗಾಮಿ ಬುಷ್ ಆಡಳಿತದ ನಂತರ. ಮೊದಲ ಆಘ್ರೋ-ಅಮೇರಿಕನ್ ಆಗಿ ಅದಿಕಾರಕ್ಕೆ ಬಂದಿದ್ದರಿಂದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ನಿರೀಕ್ಷೆಗಳು ಆಗದ ಹಿನ್ನಲೆಯಲ್ಲಿ ಹಾಗೂ ಸಂಯುಕ್ತ ರಾಷ್ಟ್ರವು ತನ್ನ ಜಾಗತಿಕ ಅದಿಪತ್ಯದ ನೀತಿಗಳ ಭಾಗವಾಗಿ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಹಲವಾರು ದೇಶಗಳ ಜನತೆಯ ಹಿತಾಸಕ್ತಿಗಳಿಗೆ ವಿರುದ್ದವಾದ ನೀತಿಗಳನ್ನು ಅನುಸರಿಸುತ್ತಿದೆ. ಭಾರತಕ್ಕೆ ಸಂಬಂದಿಸಿದಂತೆ ಅಮೇರಿಕವು ವೂಹಾತ್ಮಕ ಹೊಂದಾಣಿಕೆಯ ಹೆಸರಿನಲ್ಲಿ ಜನತೆಯ ಹಿತಾಸಕ್ತಿಗಳಿಗೆ ವಿರುದ್ದವಾದ  ಆರ್ಥಿಕ ನೀತಿಗಳನ್ನು ಅನುಸರಿಸಬೆಕೆಂದು ಸರ್ಕಾರದ ಮೇಲೆ ಅಕ್ರಮಣಕಾರಿಯಾದ ಒತ್ತಡಗಳನ್ನು ಹೇರುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಬಿ. ಮಾಧವ ಹೇಳಿದರು.

ಎಡಪಕ್ಷಗಳ ಪ್ರತಿಭಟನೆಭಾರತವನ್ನು ಅಮೇರಿಕಾದ ಮಿಲಿಟರಿ ಪಾಲುದಾರನನ್ನಾಗಿ ಮಾರ್ಪಡಿಸುವ ಭಾರತ-ಅಮೇರಿಕ ರಕ್ಷಣಾ ಚೌಕಟ್ಟು ಒಪ್ಪಂದವನ್ನು ರದ್ದುಪದಿಸಬೆಕು. ಅಮೇರಿಕದ ನ್ಯೂಕ್ಲಿಯರ್ ಸರಬರಾಜುದಾರರ ಮೇಲಿನ ಪರಮಾಣು ಭಾದ್ಯತಾ ಹಕ್ಕನ್ನು ಭಾರತ ಬಿಟ್ಟುಕೊದಬೇಕೆಂಬ ಒತ್ತಡವನ್ನು ನಿಲ್ಲಿಸಬೇಕು.  ಇರಾಕ್ ನಲ್ಲಿರುವ 50,000 ಸೈನಿಕರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೆಕು, ಅಫಘಾನಿಸ್ಥಾನದಲ್ಲಿ ಒಂದು ಸ್ವತಂತ್ರ ಮತ್ತು ತಟಸ್ಥ ರಾಜ್ಯವನ್ನು ಸ್ಶಾಪಿಸಲು ರಾಜಕೀಯ ಪ್ರಾಧಿಕಾರವನ್ನು ಕಾಣಬೇಕು ಮತ್ತು ತಕ್ಷಣದಲ್ಲೇ ಅಮೇರಿಕ-ನ್ಯಾಟೋ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮುಖಂಡರಾದ ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಯು.ಬಿ. ಲೋಕಯ, ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English