ಜುಲೈ 22 ರಂದು ಚಿತ್ರಾಪುರ ಮಠದ ವತಿಯಿಂದ ಚಾತುರ್ಮಾಸ ಆಚರಣೆ

8:39 PM, Saturday, July 20th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

kodial chaturmasaಮಂಗಳೂರು : ಪರಮಪೂಜ್ಯ ಸದ್ಯೊಜತ್ ಶಂಕರಾಶ್ರಮ ಸ್ವಾಮೀಜಿಯವರು ಈ ಬಾರಿಯ ಎರಡು ತಿಂಗಳ ಅವಧಿಯ ಚಾತುರ್ಮಾಸ ಆಚರಣೆಯನ್ನು ನಮ್ಮ ಗುರು ಪರಂಪರೆಯ ಆರನೆಯ ಮಠಧೀಶರಾಗಿದ್ದ ಪರಮ ಪೂಜ್ಯ ವಾಮನಾಶ್ರಮ ಸ್ವಾಮಿಜಿಯವರ ಮಂಗಳೂರಿನಲ್ಲಿರುವ ಸಮಾಧಿ ಸ್ಥಳದಲ್ಲಿ ಆಚರಿಸುವರು ಎಂದು ಕೊಡಿಯಾಲ್ ಚಾತುರ್ಮಾಸ ಆಚರಣಾ ಸಮಿತಿಯ ಅಧ್ಯಕ್ಷ ವಿನೋದ್ ಜಿ ಎಣ್ಣೆಮಾಡಿ ಇಂದು ಮಠದಲ್ಲಿ ನಡೆದ ಸುದ್ದಿಘೊಷ್ಟಿಯಲ್ಲಿ ತಿಳಿಸಿದರು

ಜುಲೈ 22 ರಂದು  ಸಂಭ್ರಮದ ವ್ಯಾಸಪೂಜೆಯಿಂದ ಆರಂಭಗೊಳ್ಳಳಿದೆ ಈ ಚಾತುರ್ಮಾಸವು ಭಾದ್ರಪದ ಶುಕ್ಲಪೂರ್ಣಿಮ ಸೆಪ್ಟೆಂಬರ್ 19 ಪರಮ ಪೂಜ್ಯ ಸ್ವಾಮಿಜಿಯವರ ಸೀಮೋಲ್ಲಂಘನೆಯಲ್ಲಿ ಕೊನೆಗೊಳ್ಳಲಿದೆ. ಚಾತುರ್ಮಾಸ ಅವಧಿಯಲ್ಲಿ ಪೂಜವಿಧಿಗಳು, ಭಜನೆ-ಸಂಗೀತಗಳಿಂದ ಕೂಡಿದ ವೈವಿಧ್ಯಮಯ ಕಾರ್ಯಕ್ರಮಗಳು ಪರಿಣತ ಭಕ್ತಾದಿಗಳಿಂದ ನಡೆಯಲಿವೆ. ಅದಲ್ಲದೆ  ಈ ಅವಧಿಯ ಶಿವಪೂಜೆ, ದೇವಿಪೂಜೆ, ನಡೆಯಲಿವೆ. ಈ ಬಾರಿಯ ವಿಷೇಶವೆನೆಂದರೆ ಪರಮ ಪೂಜ್ಯ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜಿಯವರ ಹನ್ನೊಂದು ವರ್ಷಗಳ ನಂತರ ಮಂಗಳೂರಿನಲ್ಲಿರ ಚಾತುರ್ಮಾಸ ನಡೆಸುತ್ತಿದ್ದಾರೆ ಎಂದರು.

ಮಹೇಶ್ ಬೊಂಡಾಲ, ಕಿರಣ್ ಪಾಣೆಮಂಗಳೂರು ಸುದ್ದಿಘೊಷ್ಟಿಯಲ್ಲಿ ಉಪಸ್ಢಿತರಿದ್ದರು .
kodial chaturmasa

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English