ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ 38ನೇ ಆರೋಪಿ ಬಂಧನ

3:30 PM, Monday, July 22nd, 2013
Share
1 Star2 Stars3 Stars4 Stars5 Stars
(4 rating, 4 votes)
Loading...

ಮಂಗಳೂರು: ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ 38ನೇ ಆರೋಪಿ ಕಂದಾವರದ ಮನೋಜ್ ಎಂಬಾತನನ್ನು ಭಾನುವಾರ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಮನೋಜ್ s/0 ಸುಂದರ ಮೂಡಬಿದರೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಕಂಕನಾಡಿ ಪೊಲೀಸರು ಬಜ್ಪೆ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 44 ಆರೋಪಿಗಳಲ್ಲಿ ಈತ 38ನೇ ಆರೋಪಿಯಾಗಿದ್ದಾನೆ. ಇನ್ನು ಆರು ಮಂದಿ ಆರೋಪಿಗಳ ಬಂಧನವಾಗಬೇಕಾಗಿದೆ.

2012ರ ಜುಲೈ 28ರಂದು ನಡೆದ ಹೋಮ್ ಸ್ಟೇ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳ ಪೈಕಿ 17 ಮಂದಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English