ಮಂಗಳೂರು : ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದುಬೈ ದೇವಾಡಿಗರ ಸಂಘದ ವತಿಯಿಂದ ಬಾನುವಾರ ನಗರದ ಮಣ್ಣಗುಡ್ಡ, ಗಾಂದಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಸಮಾಜ ಭವನದಲ್ಲಿ ದೇವಾಡಿಗ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಡಿಗ್ರೀ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜರಗಿತು.
ದುಬೈ ದೇವಾಡಿಗರ ಸಂಘದ ಅಧ್ಯಕ್ಷರಾದ ಹರೀಶ್ ಸೇರಿಗಾರ್ ಅವರು ಮಾತನಾಡಿ, ನಾವು ಸಮಾಜದಲ್ಲಿ ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಒಂದು ಕೈ ಯಿಂದ ದಾನಮಾಡಿದ್ದಲ್ಲಿ ಮತ್ತೊಂದು ಕೈಗೆ ಭಗವಂತನು ನೀಡುತ್ತಾನೆ. ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ದುಬೈಯಲ್ಲಿ 25 ವರ್ಷಗಳ ಮೊದಲೇ ಪ್ರಾರಂಭವಾಗಿತ್ತು. ಆದರೆ ಆ ಸಮಯದಲ್ಲಿ ಧನನಿಧಿಯು ಕಡಿಮೆ ಇತ್ತು. ದಾನಿಗಳು ಮತ್ತು ಸಮಾಜದ ಪ್ರಮುಖರ ಸಹಕಾರದಿಂದ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುವ ಮೊತ್ತವನ್ನು ಹೆಚ್ಚಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಕದ್ರಿ, ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ವೇತನವಾಗಿ ಹರೀಶ್ ಸೇರಿಗಾರ್ ರವರು ವೈಯಕ್ತಿಕವಾಗಿ 80,000 ರೂ ನೀಡಿದ್ದು, ಒಟ್ಟು ಅವರ ಸಂಘದಿಂದ 4 ಲಕ್ಷ ರೂ ನೀಡಿರುತ್ತಾರೆ ಎಂದರು.
ವಿದ್ಯಾರ್ಥಿ ವೇತನ ಪಡೆದಂತಹ ಮಕ್ಕಳು ಮುಂದೆ ಉತ್ತಮ ವ್ಯಕ್ತಿಗಳಾಗಿ, ನೀವು ಸಹ ಇದೇ ರೀತಿ ವಿದ್ಯಾರ್ಥಿಗಳಿಗೆ ದಾನಮಾಡುವಂತರಾಗಬೇಕು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 96 ರಷ್ಟು ಅಂಕಗಳಿಸಿದ ದೀಕ್ಷಿತ್ ಎಮ್.ಸಿ ಅವರಿಗೆ ಹರೀಶ್ ಸೇರಿಗಾರ್ ಅವರು ವೈಯಕ್ತಿಕವಾಗಿ ಲ್ಯಾಪ್‌ಟಾಪ್ ನೀಡಿ ಹಾಗೂ ಸಂಘದ ವತಿಯಿಂದ ಲು ಹೊದಿಸಿ ಸನ್ಮಾನಿಸಿದರು. ಹಾಗೂ ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ ದೇವಾಡಿಗ ಅವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು.
ಖ್ಯಾತ ನ್ಯೂರೋ ಸರ್ಜನ್ ಡಾ. ಕೆ.ವಿ.ದೇವಾಡಿಗ, ದುಬ್ಯಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ.ಜಿ ಮೋಹನ್ ದಾಸ್ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ನಿವೃತ ಉಪಕುಲಪತಿ ಡಾ.ಬಿ.ಎಸ್. ಸೇರಿಗಾರ್ ಮುಂತಾದವರು ಮುಖ್ಯ ಅಥಿಗಳಾಗಿದ್ದರು.
ಸಂಘದ ಕೋಶಾಧಿಕಾರಿ ಸದಾಶಿವ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಮೋಹನ್ ದೇವಾಡಿಗ ಬಾಕಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ರಾಮಚಂದ್ರ ದೇವಾಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ವಾಮನ ಮರೋಳಿ ಧನ್ಯವಾದವಿತ್ತರು. ವೀಣಾ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English