ಮಂಗಳೂರು : ದ.ಕ. ಜಿಲ್ಲಾ ಟ್ಯಾಕ್ಷಿಮೆನ್ಸ್ ಮತ್ತು ಮ್ಯಾಕ್ಷಿಕ್ಯಾಬ್ ಎಸೋಸಿಯನ್ ಇವರಿಂದ ಜುಲೈ 23ರಂದು ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಸೇವಾ ಶಿಬಿರವು ಲಯನ್ಸ್ ಸೇವಾ ಮಂದಿರ, ಕದ್ರಿ, ಮಲ್ಲಿಕಟ್ಟೆಯಲ್ಲಿ ಬೆಳಿಗ್ಗೆ 8.00 ರಿಂದ 12.30ರ ತನಕ ಜರುಗಲಿರುವುದು ಎಂದು ಲಾಲ್ಬಾಗ್ ಲಯನ್ಸ ಕ್ಲಬ್ಬಿನ ಅಧ್ಯಕ್ಷ ಉಮನಾಥ್ ಇವರು ಇಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಘೊಷ್ಟಿಯಲ್ಲಿ ತಿಳಿಸಿದರು.
ಈ ಶಿಬಿರದ ಉದ್ಘಾಟನೆಯನ್ನು ಕ್ಷೇಮ ಮಲ್ಲಿಕಟ್ಟೆ ಇಲ್ಲಿನ ಪ್ರೊ. ಚಾನ್ಸೆಲರ್ ಆದ ಡಾ. ಶಾಂತರಾಮ್ ಶೆಟ್ಟಿಯವರು ನಡೆಸಲಿದ್ದಾರೆ. ಅಜಿತ್ ಕುಮಾರ್ ಹೆಗ್ಡೆ, ಕೆ.ಎಸ್.ಎಸ್, ಆಯುಕ್ತರು, .ಶ್ರೀ ಎ.ಜೆ.ಶೆಟ್ಟಿ ಹಾಗೂ ಇನ್ನಿತರರು ಅಥಿತಿಗಳಾಗಿ ಭಾಗವಹಿಸುವರು.
ರಕ್ತದಾನ ಶಿಬಿರವು ಫಾ.ಮುಲ್ಲರ್ಸ್ ಚಾರಿಟೇಬಲ್ ಮಂಗಳೂರು, ತೇಜಸ್ವಿನಿ ಆಸ್ಪತ್ರೆ ದೇರಳಕಟ್ಟೆ, ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ನಡೆಯಲಿದೆ. ಉಚಿತ ನೇತ್ರ ಸೇವಾ ಶಿಬಿರವು ಪ್ರಸಾದ್ ನೇತ್ರಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಂಗಳೂರು ಇದರ ಸಹಯೋಗದಲ್ಲಿ ನಡೆಯಲಿದೆ.
ಪತ್ರಿಕಾ ಘೊಷ್ಟಿಯಲ್ಲಿ ಆನಂದ್, ವಿನ್ಸೆಂಟ್ ಪಿಂಟೊ, ಕೋನಿ ಸಾಲ್ದನಾ, ನಾಗೇಶ್ ಉಪಸ್ಥಿತರಿದ್ದರು
Click this button or press Ctrl+G to toggle between Kannada and English