ಮಂಗಳೂರು: ದ.ಕನ್ನಡ ಮತ್ತು ಉತ್ತರ ಕೇರಳದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ 2013ನೇ ನೊಂದಾವಣೆಯು ಪ್ರಾರಂಭಗೊಂಡಿದೆ. ಇದು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಒಳ ಮತ್ತು ಹೊರರೋಗಿಗಳ ವಿಭಾಗದಲ್ಲಿ ಬಹುದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಕಾರ್ಡ್ ನ ನೊಂದಾವಣೆಯು ಜುಲೈ 31 ಕೊನೆಗೊಳ್ಳುವುದೆಂದು ಕೆ.ಎಂ.ಸಿ. ಆಸ್ಪತ್ರೆಯ ಡೀನ್ ಡಾ.ಎಂ.ವಿ.ಪ್ರಭುರವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಘೊಷ್ಠಿಯಲ್ಲಿ ತಿಳಿಸಿದರು.
ಕೆ.ಎಂ.ಸಿ. ಆಸ್ಪತ್ರೆಯ ಮಧುಸೂದನ್ ಉಪಾದ್ಯರವರು ಕಾರ್ಡ್ ನ ಪ್ರಯೋಜನಗಳ ಬಗ್ಗೆ ವಿವರಿಸುತ್ತಾ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ, ಕೆ.ಎಂ.ಸಿ. ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ನಲ್ಲಿ 50% ರಿಯಾಯಿತಿ, ಒಳ ಮತ್ತು ಹೊರರೋಗಿಗಳ ಜನರಲ್ ವಾರ್ಡ್ ನಲ್ಲಿ 25% ರಿಯಾಯಿತಿ, ಲ್ಯಾಬ್ ಇನ್ವೆಸ್ಟಿಗೇಶನ್ನಲ್ಲಿ ಹಾಗೂ ರೇಡಿಯೋಲಜಿ ಇನ್ವೆಸ್ಟಿಗೇಶನ್ನಲ್ಲಿ 20% ರಿಯಾಯಿತಿ, ಔಷಧಿಯ ಮೇಲೆ 10% ರಿಯಾಯಿತಿ ದೊರೆಯುತ್ತದೆ ಎಂದು ಹೇಳಿದರು.
ಈ ಕಾರ್ಡ್ ನ ಬೆಲೆ ವೈಯುಕ್ತಿಕ ಕಾರ್ಡ್ ಗೆ 250, ಕೌಟುಂಬಿಕ ಕಾರ್ಡ್ ಗೆ 500ರೂ ಆಗಿರುತ್ತದೆ. ಕೌಟುಂಬಿಕ ಕಾರ್ಡ್ ನಲ್ಲಿ ಆತನ/ಅವಳ ಪತಿ, ಪತ್ನಿ ಮತ್ತು 21 ವರ್ಷದೊಳಗಿನ ಮಕ್ಕಳು ಸದಸ್ಯರಾಗಬಹುದು. ಕೌಟುಂಬಿಕ ಕಾರ್ಡ್ ಗೆ ತಂದೆ,ತಾಯಿ ಸೇರಿಸಲು 100 ಪ್ರತ್ಯೇಕ ಪಾವತಿಯೊಂದಿಗೆ ಈ ಕಾರ್ಡ್ ನಲ್ಲಿ ಸದಸ್ಯರಾಗಿರಬಹುದು ಎಂದು ಕೆ.ಎಂ.ಸಿ. ಆಸ್ಪತ್ರೆಯ ಅಂಬೇಡ್ಕರ್ ವೃತ್ತದ ವೈದ್ಯಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಸುದ್ದಿಘೊಷ್ಠಿಯಲ್ಲಿ ಹೇಳಿದರು.
Click this button or press Ctrl+G to toggle between Kannada and English