ಮಂಗಳೂರು : ಕುಂಟಿಕಾನ್ ನಿಂದ ಕಾವೂರಿನ ರಸ್ತೆಯಲ್ಲಿ ಮುಲ್ಲಕಾಡುವಿನ ಪೋರ್ಥ್ ಮೈಲ್ ಎಂಬಲ್ಲಿ 23-07-13 ಮಂಗಳವಾರದಂದು 30 ವರ್ಷದ ಹಳೆಯ ಮಾವಿನ ಮರವು ಹೈ-ಟೆನ್ಶನ್ ವಿದ್ಯುತ್ ಕಂಬಗಳ ಮೇಲೆ ಬಿದ್ದು 4 ಕಂಬಗಳು ಕುಸಿದು ಬಿದ್ದಿದೆ. ಇದರ ಪರಿಣಾಮುವಾಗಿ ಬೆಳಿಗ್ಗೆ 6ರಿಂದ ಸಂಜೆ 4ರ ವರೆಗೆ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ,
ಮರವು ಬೃಹತ್ ಗಾತ್ರದಲ್ಲಿ ಬೆಳೆದ ಪರಿಣಾಮವಾಗಿ ತನ್ನ ಹೊರೆಯನ್ನು ತಾಳಲಾರದೆ ಕುಸಿಯಿತು. ಈ ಮರವು ಹಿಂದಿನ ದಿನ ರಾತ್ರಿಯುಂದಲೇ ಕಸಿಯಲು ಪ್ರಾರಂಭವಾಗಿದೆ ಎಂದು ನೋಡುಗರು ಮೆಗಾ ಮೇಡಿಯಾ ನ್ಯೂಸ್ ಗೆ ಕ್ಕೆ ತಿಳಿಸಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಕಾರ್ಪೋರೇಟರ್ ದೀಪಕ್ ಪೂಜರಿ ಆಗಮಿಸಿ, ಸ್ಥಳೀಯರ ಸಹಾಯದಿಂದ ಕುಸಿದು ಬಿದ್ದಮರವನ್ನು ಆ ಮರವನ್ನು ಕಡಿಯಲು ಅಡಚಣೆಯಾಗಿರುವ ಸರಕಾರದ ಜಾಗದಲ್ಲಿದ್ದ ಇನ್ನೆರಡು ಮರವನ್ನು ಸಹ ಕಡಿದು ರಸ್ತೆಯನ್ನು ತೆರವುಗೊಳಿಸಲಾಯಿತು .
Click this button or press Ctrl+G to toggle between Kannada and English