ಕಾಸರಗೋಡು: ಗುರುವಾರ ಬೆಳಗ್ಗೆ 7.45 ರ ಸಮಯದಲ್ಲಿ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚೆರ್ಕಳ ಸಮೀಪ ಬೇವುಂಜೆಯಲ್ಲಿ ನಡೆದಿದೆ. ಅಫಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಹುಬ್ಬಳ್ಳಿ ನಿವಾಸಿ ನಾಗರಾಜ(29) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ ಮಾನಂತವಾಡಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಮತ್ತು ಎದುರಿನಿಂದ ಬಂದ ವಾಹನವನ್ನು ಓವರ್‌ಟೇಕ್ ಮಾಡಿ ಬಂದ ಲಾರಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು.
ಲಾರಿಯ ಎದುರು ಭಾಗ ಬಸ್ಸಿನ ಮುಂಭಾಗವನ್ನು ಸೀಳಿ ಒಳನುಗ್ಗಿದೆ. ಕ್ಯಾಬಿನ್‌ನೊಳಗೆ ಸಿಲುಕಿಕೊಂಡ ಲಾರಿ ಚಾಲಕನನ್ನು ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಸೇರಿ ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೊರ ತೆಗೆದರು. ಅದರೂ ಲಾರಿ ಚಾಲಕ ಮೃತಪಟ್ಟಿದ್ದ. ಲಾರಿ ಕ್ಲೀನರ್ ರಾಮದಾಸ್ ಮತ್ತು ಬಸ್ ಪ್ರಯಾಣಿಕ ತಿತ್ತಯ್ಯ ಸ್ವಾಮಿ, ಬಸ್ ಚಾಲಕ ಮಾಂಞಾಡ್ ಪರಂಬ ಧರ್ಮಶಾಲದ ನಿವಾಸಿ ಮುತ್ತು (25) ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್ ನಿರ್ವಾಹಕ ಬಂದಡ್ಕದ ಬಾಲಚಂದ್ರ(27), ಪ್ರಯಾಣಿಕರಾದ ಮುಳ್ಳೇರಿಯಾದ ಸುರೇಶ್(37), ಅದ್ರುಕುಳಿಯ ಪುರುಷೋತ್ತಮ ನಾಯರ್(55) ಅವರನ್ನು ನುಳ್ಳಿಪ್ಪಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಾನಂತವಾಡಿಯ ಖಾಸಿಂ(42), ಸವಿತಾ(25), ಮಂಞಪಾರೆಯ ಟಿ.ಕೆ.ಅಬ್ದುಲ್ ಕಾದರ್(35), ಮಡಿಕೈಯ ಮುಹಮ್ಮದ್ ಬಶೀರ್(63), ಬದಿಯಡ್ಕದ ಶೈಜು(30), ಎಡನೀರಿನ ವಿಪಿನ್(18), ಚೆರ್ಕಳದ ಕೆ.ಜಿ.ಜೋಯ್(59), ಭಾಸ್ಕರ(42), ಕಂಬಾರ್ ಬೆದ್ರಡ್ಕದ ಅಬ್ದುಲ್ಲ(47), ವಿದ್ಯಾನಗರದ ಪ್ರಮೋದ್ ಕುಮಾರ್(43), ಎಡನೀರು ವೀರಮೂಲೆಯ ಬಾಲಕೃಷ್ಣ(57), ವಿದ್ಯಾನಗರದ ಪ್ರೇಮ ಕುಮಾರ್(49), ಚಾಲದ ಪಿ.ಸಿ.ರಾಜು(48) ಅವರನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬದಿಯಡ್ಕ ಚೆಕ್ಕಿನಡ್ಕದ ಎಲ್ಸಿ(37), ಪುತ್ರಿ ಮೇರಿ ಅವರನ್ನು ಕಾಂಞಂಗಾಡ್‌ನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ವಾಹನ ಅಪಘಾತದಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿತು.
Click this button or press Ctrl+G to toggle between Kannada and English