ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆ

8:38 PM, Tuesday, November 9th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆಮಂಗಳೂರು :  ಪಿಂಗಾರ ಬಳಗ ಪ್ರತಿ ವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಕೊಂಕಣಿ ಭಾಷೆಗಾಗಿ ದುಡಿದ ಮಾಂಡ್ ಸೋಭಾಣ್ ಸಂಸ್ಥೆಯ ಅಧ್ಯಕ್ಷರಾದ ಲೂಯಿಸ್ ಪಿಂಟೋ ಇವರಿಗೆ ನೀಡಿ ಗೌರವಿಸಲಾಯಿತು.

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆಇಂದು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಲೂಯಿಸ್ ಪಿಂಟೋ ಅವರನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಹಾಗೂ ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆ, ಸನ್ಮಾನ ಫಲಕ, ಶಾಲು, ಹಾಗೂ ಪೇಟ ತೊಡಿಸಿ ಸನ್ಮಾನಿಸಿ ರಾಜ್ಯ ಪ್ರಶಸ್ತಿ ನೀಡಲಾಯಿತು.

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಲೂಯಿಸ್ ಪಿಂಟೋ ಸತತ ಇಪ್ಪತ್ತೈದು ವರ್ಷಗಳಿಂದ ಕೊಂಕಣಿ ಜನರು ಗೌರವಿಸುವ ಮಾಂಡ್ ಸೋಬಾಣ್ ಸಂಸ್ಥೆ ವಿಶ್ವದಾದ್ಯಂತ ಕೀರ್ತಿ ಪಡೆಯಲು ಕಾರಣರಾದ ಎಲ್ಲರಿಗೂ ಈ ಪ್ರಶಸ್ತಿ ಸಂದಿದೆ ಎಂದು ಹೇಳಿದರು.
ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನದೊಂದಿಗೆ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್ ನ ಅಧ್ಯಕ್ಷ ಸುಧೀರ್ ಘಾಟೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ದೇವಿಕಾ ಸಾರಿ ಮಾಲಕರಾದ ಜ್ಯೋತಿಕಾ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿ’ ಕುನ್ಹಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ 2010 ಸಮರ್ಪಣೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English