ಸಚಿವ ಯು.ಟಿ. ಖಾದರ್‌ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ

10:40 PM, Sunday, July 28th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Ut khaderಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಶನಿವಾರ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಲೇಡಿಗೋಶನ್‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 260 ಹಾಸಿಗೆಗಳಿದ್ದು, ಅದಕ್ಕೆ 100 ಹಾಸಿಗೆಗಳನ್ನು ಸೇರಿಸಲಾಗುವುದು, ಈ ಯೋಜನೆಗಾಗಿ ಎನ್‌ಆರ್‌ಎಚ್‌ಎಂ ಯೋಜನೆಯಲ್ಲಿ ಕೆಎಚ್‌ಎಸ್‌ಡಿಆರ್‌ಪಿ ಅಡಿಯಲ್ಲಿ 10.46 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಮುಂದಿನ ಹಂತದಲ್ಲಿ ಇದನ್ನು 500 ಹಾಸಿಗೆಗ‌ಳ ಸುಸಜ್ಜಿತ ಮಾದರಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಎಂಆರ್‌ಪಿಎಲ್‌ ವತಿಯಿಂದ ಹಮ್ಮಿಕೊಂಡಿರುವ ಕಾಮಗಾರಿಯ ಹೊರತಾಗಿ ಈ ಕೆಲಸಗಳು ನಡೆಯಲಿವೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಎಂದು ತಿಳಿಸಿದರು.

ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಗರ್ಭಿಣಿಯರನ್ನು ಮನೆಯಿಂದ ಆಸ್ಪತ್ರೆಗೆ ದಾಖಲಿಸುವುದು, ಹೆರಿಗೆ ಪ್ರಕ್ರಿಯೆ, ಬಳಿಕ ಮಗು ಮತ್ತು ಬಾಣಂತಿಯ ಆರೈಗೆ ಮಾಡಿ ಸುರಕ್ಷಿತವಾಗಿ ಅಲ್ಲಿಂದ ಕಳುಹಿಸುವ ತನಕದ ಎಲ್ಲ ಸೇವೆಗಳು ಉಚಿತವಾಗಿದೆ.  ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು ಅವರ ಮನೆಗೆ ಸುರಕ್ಷಿತವಾಗಿ ತಲುಪಿಸುವ ಸೇವೆಯನ್ನೂ ಉಚಿತವಾಗಿ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ- ಜನಸಾಮಾನ್ಯರ ಹಕ್ಕು ಎಂಬುದನ್ನು ತಿಳಿಯಪಡಿಸುವುದು ಇದರ ಉದ್ದೇಶ ಎಂದು ಸಚಿವ ಖಾದರ್‌ ವಿವರಿಸಿದರು.

ವೈದ್ಯರು ಕಡ್ಡಾಯವಾಗಿ 2 ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸ ಬೇಕೆಂದು ಸಲಹೆ ಮಾಡಿದರು.

ಲೇಡಿಗೋಶನ್‌ ಆಸ್ಪತ್ರೆಯ ಅಧೀಕ್ಷಕಿ ಡಾ| ಎಂ.ಎಂ ಶಕುಂತಳಾ, ಕೆಎಂಸಿ ಡೀನ್‌ ಡಾ| ಎಂ.ವಿ. ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English