ಮಂಗಳೂರು : ತಣ್ಣೀರು ಬಾವಿ ಪ್ರದೇಶದ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮತ್ತು ವಲಯ ವಿಂಗಡನೆಯ ಸರ್ವೇ ಇದುವರೆಗೆ ಮಾಡದಿರುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ದಲಿತ ಹಕ್ಕುಗಳ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯ ಗೇಟಿನ ಬಳಿ ಜುಲೈ 29 ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ಪ ಕೊಂಚಾಡಿ ಅವರು ಕಳೆದ 80 ವರ್ಷಗಳಿಂದ ವಾಸವಾಗಿರುವ ತಣ್ಣೀರು ಬಾವಿಯ ಪ್ರದೇಶದ 300 ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವರೇ ದಲಿತ ಹಕ್ಕುಗಳ ಸಮಿತಿ ಮತ್ತು ಸಿಪಿಐ(ಎಂ) ಪಕ್ಷದ ನಗರ ಸಮಿತಿಯು ಕಳೆದ ಎರಡು ವರ್ಷಗಳಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಇದೆ ಎಂದರು.
ಈಗಾಗಲೇ 3 ಬಾರಿ ಪ್ರತಿಭಟನೆ ನಡೆಸಲಾಗಿದೆ. ಈ ಮೊದಲು ಸಿಆರ್ಝಡ್ ನಿಯಮಕ್ಕೆ ಒಳಪಡುವ ಕಾರಣ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದ ಸರಕಾರ, ನಮ್ಮ ನಿರಂತರ ಹೋರಾಟದ ಫಲವಾಗಿ ಸಿಆರ್ಝಡ್ ನಿಯಮಕ್ಕೆ ತಿದ್ದುಪಡಿಯಾಗಿದ್ದು ಆ ಪ್ರಕಾರ ವಲಯ 2 ಮತ್ತು 3ರಲ್ಲಿರುವ ಮನೆಗಳಿಗೆ ಹಕ್ಕು ಪತ್ರ ನೀಡಬಹುದೆಂದು ಸ್ಪಷ್ಟವಾಗಿ ಸಂಬಂಧಿತ ಇಲಾಖೆ ಸ್ಪಷ್ಟೀಕರಣ ನೀಡಿದೆ. ಆ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಮಹೇಶ್ವರ ರಾವ್ ರವರು ಸರ್ವೇ ನಡೆಸಲು ಮ.ನ.ಪಾ.ಕ್ಕೆ ಆದೇಶ ನೀಡಿದ್ದರು. ಆದರೆ ಮ.ನ.ಪಾ.ವು ಈ ಸವರ್ೆಯನ್ನು ತಾಲೂಕು ಸರ್ವೇ ಇಲಾಖೆಯಿಂದ ಮಾಡಿಸಬೇಕೆಂದು ವಿನಂತಿಸಿರುತ್ತದೆ. ಆದಾದ ಬಳಿಕ ಕಳೆದ ವರುಷ ಈ ಬಗ್ಗೆ ತಾಲೂಕು ಸರ್ವೇ ನಡೆಸಲು ಪ್ರತಿಭಟನೆ ಕೂಡಾ ನಡೆಸಿರುತ್ತೇವೆ ಎಂದು ಹೇಳಿದರು.
ಈ ತನಕವೂ ಸರ್ವೇ ನಡೆಸದೆ ಮೀನ ಮೇಷ ಎಣಿಸಲಾಗಿತ್ತಿದೆ. ಹಕ್ಕುಪತ್ರವಿಲ್ಲದೆ ಮನೆ ನಂಬ್ರ ಇಲ್ಲ. ಮನೆ ನಂಬ್ರ ಇಲ್ಲದೆ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಸುಮಾರು 1000ಕ್ಕೂ ಮಿಕ್ಕಿದ ಜನತೆ ಬದುಕುತ್ತಿದ್ದಾರೆ. ಆದುದರಿಂದ ತಕ್ಷಣ ಸರ್ವೇ ನಡೆಸಿ ಹಕ್ಕು ಪತ್ರ ವಿತರಿಸಬೇಕಾಗಿ ಇಂದು ನಾಲ್ಕನೆಯ ಬಾರಿಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಈ ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಬಜಾಲ್ ಸಿಪಿಐ(ಎಂ) ನಗರ ಕಾರ್ಯದರ್ಶಿ, ಲಿಂಗಪ್ಪ ನಂತೂರು ಕಾರ್ಯದರ್ಶಿ ದಲಿತ ಹಕ್ಕುಗಳ ನಗರ ಸಮಿತಿ, ಬೇಬಿ ದಲಿತ ಹಕ್ಕುಗಳ ಸಮಿತಿ ಮುಂದಾಳು ಮತ್ತು ಮುಂತಾದವರು ಭಾಗವಹಿಸಿದ್ದರು.
Click this button or press Ctrl+G to toggle between Kannada and English