ಉಡುಪಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

12:25 AM, Tuesday, July 30th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

udupi rape accused ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯೋಗೇಶ, ಹರಿಪ್ರಸಾದ್ ಮತ್ತು ಆನಂದನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೆ ನ್ಯಾಯಾಧೀಶರು ಆಗಸ್ಟ್ 12 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.

ಈ ಮೂವರೂ ಆರೋಪಿಗಳನ್ನು  ಜುಲೈ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರ ತೀರ್ಪಿನಂತೆ ಜುಲೈ 29 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು .

ಕಾನೂನಿನಂತೆ ಆರೋಪಿಗಳನ್ನು ಪ್ರತೀ 15 ದಿವಸಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ಸೂಚಿಸುತ್ತಾರೆ. ಅವರನ್ನು ಇಂದು ಈ ಶಿವಮೊಗ್ಗ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಸಾಕ್ಷ್ಯ ನಾಶಪಡಿಸಿದ ಆರೋಪಿಗಳ ಸಹೋದರರಾದ ಹರೀಂದ್ರ ಮತ್ತು ಬಾಲಚಂದ್ರರನ್ನೂ ಹಿರಿಯಡ್ಕ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English