ಮಂಗಳೂರು : ದಿ.ಬೊಂಡಾಲ ಜಗನ್ನಾಥ ಶೆಟ್ಟಿಯವರ ಪ್ರಥಮ ಪುಣ್ಯತಿಥಿಯನ್ನು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣುಹಂಪಲುಗಳನ್ನು ನೀಡುವ ಮೂಲಕ ಆಚರಿಸಲಾಯಿತು.
ಬಳಿಕ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿಯವರು ಬಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ಯುವ ಕಾಂಗ್ರೆಸ್ ನಾಯಕನಿಗೆ ಶ್ರದ್ದಾಂಜಲಿ ಸಮರ್ಪಿಸಲಾಯಿತು.
ಶ್ರದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ಮಾತನಾಡಿ 2001 ರಿಂದ 2009 ರ ತನಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬೊಂಡಾಲ ಅವರ ಕಾಲದಲ್ಲಿ ನಡೆದಂತಹ ಜನಪರ ಕೆಲಸಗಳನ್ನು ನೆನಪಿಸಿಕೊಂಡರು. ಸದ್ಭಾವನಾ ರ್ಯಾಲಿ, ಜಿಲ್ಲಾ ಮಟ್ಟದಲ್ಲಿ ನಡೆದಂತಹ ಉಚಿತ ಅಕ್ಕಿ ವಿತರಣೆ, ಬಡ ಮಹಿಳೆಯರಿಗೆ ಸೀರೆ ವಿತರಣೆ ಹಾಗೂ ರಕ್ತದಾನ ಶಿಬಿರದಂತಹ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಸ್ಮರಿಸಿದರು.
ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜ, ಸುರೇಶ್ ಬಲ್ಲಾಳ್, ಕೋಡಿಜಾಲ್ ಇಬ್ರಾಹಿಂ, ನಾಗೇಂದ್ರ ಕುಮಾರ್, ಕಾರ್ಪೊರೇಟರ್ಗಳಾದ ಪ್ರವೀಣ್ ಆಳ್ವ, ಎ.ಸಿ.ವಿನಯ ರಾಜ್, ಪ್ರಕಾಶ್ ಸಾಲಿಯಾನ್, ರಜನೀಶ್ ಜಿಲ್ಲಾ ಕಾರ್ಯದರ್ಶಿಗಳಾದ ಟಿ.ಕೆ.ಸುಧೀರ್, ಹಾಗೂ ವಿಶ್ವಾಸ್ ಕುಮಾರ್ ದಾಸ್, ಪಧಾಧಿಕಾರಿಗಳಾದ ಹರ್ಬಟ್ ಡಿ’ಸೋಜ ಕಡೆಕಾರ್, ವಿಜಯಲಕ್ಷ್ಮಿ, ಸುಧೀರ್ ಕಡೆಕಾರ್, ಡೆನ್ನಿಸ್ ಡಿ’ಸಿಲ್ವ, ಹೇಮಂತ್ ಕುಮಾರ್, ಅನಿಲ್ ರಸ್ಕಿನ್, ಕೃತಿನ್ ಕುಮಾರ್, ಗುರುಪ್ರವೀಣ್ ಭಟ್, ನಿತಿನ್ ಗಟ್ಟಿ, ರಂಜನ್ ಶೆಟ್ಟಿ, ನವಾಜ್ ಜೆಪ್ಪು, ಅಬೂಬಕ್ಕರ್, ಓಸ್ವಾಲ್ ಫುರ್ಟಾಡೋ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English