ದಮ್ಮಾಮ್ ( ಸೌದಿ ಅರೇಬಿಯಾ) : ಇಂಡಿಯಾ ಫ್ರಟೆರ್ನಿಟಿ ಫೋರಂ ಪೂರ್ವ ವಲಯದ ನೇತೃತ್ವದಲ್ಲಿ ದಮ್ಮಾಮ್ , ಜುಬೈಲ್ ,ಹಪರಲ್ ಭಾತಿನ್ ಹಾಗೂ ಅಲ್ ಹಸ್ಸಾಗಳಲ್ಲಿ ಬೃಹತ್ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗಿತ್ತು.
ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ ಸಾಮಾಜಿಕ ಸೇವೆಯಲ್ಲಿ ಮಂಚೂಣಿಯಲ್ಲಿರುವ ಇಂಡಿಯಾ ಫ್ರಟೆರ್ನಿಟಿ ಫೋರಂ ಭಾರತದ ಹಲವು ರಾಜ್ಯಗಳ ಸದಸ್ಯರನ್ನೊಳಗೊಂಡಿದೆ.
ದಮ್ಮಾಂ ಹಾಗೂ ಹಫರಲ್ ಬಾತಿನ್ನಲ್ಲಿ ಸಲೀಂ ಜಿ. ಕೆ. ರವರು, ಜುಬೈಲ್ ನಲ್ಲಿ ಪರ್ವೇಜ್ ಅಹ್ಮದ್ ಬಿಹಾರ್, ಮತ್ತು ಅಲ್ ಹಸ್ಸಾ ದಲ್ಲಿ ಅಬ್ದು ಸ್ಸುಭಾನ್ ರವರು ಪವಿತ್ರ ರಂಝಾನ್ ತಿಂಗಳ ಶ್ರೇಷ್ಠತೆ , ಗುರಿ ಹಾಗೂ ರಂಝಾನ್ ಉಪವಾಸ ವ್ರತದ ಮಹತ್ವಗಳ ಸಂದೇಶಗಳನ್ನು ನೀಡಿದರು.
ದಮ್ಮಾಮ್ ನಾಹ್ದ ಕ್ಲಬ್ ನಲ್ಲಿ ಏರ್ಪಡಿಸಿದ ಇಫ್ತಾರ್ ನಲ್ಲಿ ಸುಮಾರು 275 ಕ್ಕಿಂತಲೂ ಹೆಚ್ಚು ಜನ , ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ 400 ರಷ್ಟು ನಾಗರೀಕರು ಪಾಲ್ಗೊಂಡರು. ಅಲ್ ಹಸ್ಸಾದ ಇಸ್ತ್ರಾ ಅಲ್ ಮಲಿಕಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಸಂಗಮದಲ್ಲಿ ಸುಮಾರು 280 ಮಂದಿ ಹಾಗೂ ಹಫರಲ್ ಬಾತಿನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 100 ರಷ್ಟು ನಾಗರೀಕರು ಭಾಗವಹಿಸಿದರು.
ಫಯಾಝ್ ಎನ್. ದಮ್ಮಾಂ ನಲ್ಲಿ , ಸಲೀಂ ಜುಬೈಲ್ ನಲ್ಲಿ , ಅಕ್ಬರ್ ಅಲ್ ಹಸ್ಸಾ ದಲ್ಲಿ ಮತ್ತು ಅಶ್ರಫ್ ಕೆ. ಹಫರಲ್ ಬಾತಿನ್ನಲ್ಲಿ ಐ.ಎಫ್.ಎಫ್. ನ ಸ್ಥೂಲ ಮಾಹಿತಿ ನೀಡಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English