ನಗರದ ವುಡ್‌ಲ್ಯಾಂಡ್ಸ್ ನಲ್ಲಿ ಜೂಟ್ ಮೇಳ ಉದ್ಘಾಟನೆ

12:42 AM, Thursday, August 1st, 2013
Share
1 Star2 Stars3 Stars4 Stars5 Stars
(5 rating, 7 votes)
Loading...

Jute fair ಮಂಗಳೂರು : ನಗರದ ವುಡ್‌ಲ್ಯಾಂಡ್ಸ್ ನಲ್ಲಿ ಜುಲೈ 31 ರಿಂದ 5 ದಿನಗಳ ಕಾಲ ನಡೆಯಲಿರುವ  ಜೂಟ್ ಮೇಳವನ್ನು  ಜಿಲ್ಲಾಧಿಕಾರಿ ಎನ್.ಪ್ರಕಾಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ಲಾಸ್ಟಿಕ್ ಬಳಕೆಯ ಪರ್ಯಾಯ ಉತ್ಪನ್ನವಾಗಿ ಜೂಟ್‌ನಿಂದ ತಯಾರಾದ ವಸ್ತುಗಳನ್ನು ಬಳಸಬಹುದು. ಜೂಟ್‌ ಪರಿಸರ ಸ್ನೇಹಿ ಉತ್ಪನ್ನವಾಗಿದ್ದು ಪ್ಲಾಸ್ಟಿಕ್ ವಸ್ತುಗಳಿಗೆ ಬದಲಾಗಿ ಅವುಗಳನ್ನು ಬಳಸಬಹುದು ಎಂದು ಹೇಳಿದರು.

ಮೇಳದಲ್ಲಿ ಗ್ರಾಹಕರ ಮೆಚ್ಚುಗೆಯ ವಸ್ತುಗಳಾದ ಅಲಂಕಾರಿಕ ಸಾಮಾಗ್ರಿಗಳು, ಮನೆಯ ಸಾಮಾಗ್ರಿಗಳು, ಹಾಗೂ ಇನ್ನಿತ್ತರ ಉತ್ಪನ್ನಗಳನ್ನು ಮಾರಾಟಮಾಡಲಾಗುತ್ತಿದೆ, ಜೂಟ್ ಉತ್ಪನ್ನಗಳು ಪರಿಸರ ನೈರ್ಮಲ್ಯಕ್ಕೆ ಸಹಕಾರಿ ಎಂದು ತಿಳಿಸಿದರು.

ನ್ಯಾಷನಲ್ ಜೂಟ್ ಬೋರ್ಡ್ ಈ ಪ್ರದರ್ಶನ ಮತ್ತು ಮಾರಟದ ಮೇಳವನ್ನು ಸಂಯೋಜಿಸಿದೆ. ಒಟ್ಟು 25 ಮಳಿಗೆಗಳನ್ನು ತೆರೆಯಲಾಗಿದ್ದು, ಕರ್ನಾಟಕ, ತಮಿಳ್ ನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶ ಸೇರಿದಂತೆ ದೇಶದಲ್ಲಿನ ವಿವಿಧ ರಾಜ್ಯಗಳ ಮಾರಾಟಗಾರರ ಮಳಿಗೆಗಳಿವೆ.

ಜೂಟ್ ವಸ್ತು ಪ್ರದರ್ಶನ ಮತ್ತು ಮಾರಾಟವು ಜುಲೈ 31 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ, ದೇಶದ ವಿವಿಧ ಮೂಲೆಗಳಲ್ಲಿ ತಯಾರಾದ ವಿಭಿನ್ನ ರೀತಿಯ ಜೂಟ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಜೂಟ್ ಬೋರ್ಡ್ ನ ಟಿ.ಅಯ್ಯಪ್ಪನ್ ತಿಳಿಸಿದರು.

Jute fair

Jute fair

Jute fair

Jute fair

Jute fair

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English