ಮಂಗಳೂರು : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಅಕ್ಷರ ದಾಸೋಹ, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಇದರ ಸಹಯೋಗದಲ್ಲಿ ಆಗಸ್ಟ್ 1 ರಂದು ಸರಕಾರಿ ಮಾದರಿ ಹಿರಿಯ ಪ್ರಾಥವಿಕ ಶಾಲೆ ಉರ್ವ ಮಂಗಳೂರು ಇಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಿಸುವ `ಕ್ಷೀರ ಭಾಗ್ಯ’ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಚಾಲನೆ ನೀಡಿದರು.
ಈ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಾತಾಡಿ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ಉಚಿತವಾಗಿ ಹಾಲು ವಿತರಿಸಲಾಗುವುದು. ಈ ಹಾಲಿನ ಜೊತೆ ಕೆನೆಭರಿತ ಮತ್ತು ಕೆನೆರಹಿತ ಹಾಲಿನ ಪುಡಿಯನ್ನು ನೀಡಲಗುತ್ತದೆ.
ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ ಈ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರಿಮಂತ ಮಕ್ಕಳಿಗೆ ಅವರ ಮನೆಯಲ್ಲಿ ಪೌಷ್ಟಿಕಾಂಶದ ಆಹಾರ ದೊರೆಯುತ್ತದೆ. ಆದರೆ ಬಡವರ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಇದೆ. ಇದರಿಂದಾಗಿ ಮಕ್ಕಳು ಶಾಲೆಯಲ್ಲಿ ಕಳಿಕೆ ವಿಷಯದಲ್ಲಿ ಹಿಂದುಳಿಯುತ್ತಾರೆ. ಇದು ಬಡವರ ಮಕ್ಕಳಿಗೆ ಅನುಕೂಲವಾಗುತ್ತದೆ. ಇದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಗೆಯಾಗಬಹುದು. ಈ ಯೊಜನೆಯಿಂದಾಗಿ ಹಾಲು ಉತ್ಪಾದಕರಿಗೂ ಹೆಚ್ಚಿನ ಲಾಭವಾಗಲಿದೆ.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಬಿ.ವಿ.ಸತ್ಯನಾರಾಯಣ್ ಅವರು ಮಾತಾಡಿ ಗುಜರಾತ್ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಹಾಲಿನ ಉತ್ಪಾದನೆ ಹೆಚ್ಚಿಗೆಗಾಗಿ ಪ್ರೋತ್ಸಾಧನವನ್ನು 2ರೂಯಿಂದ 4ರೂಪಯಿಗೆ ಏರಿಸಲಾಗಿದೆ.
ಎಲ್ಲಾ ಮಕ್ಕಳು ಹಾಲನ್ನು ಸೇವಿಸಬೇಕು, ಇದರಿಂದಾಗಿ ಮಕ್ಕಳು ಆರೋಗ್ಯವಂತರಾಗಿರುತ್ತಾರೆ, ಮಕ್ಕಳ ಆರೋಗ್ಯ ವೃದ್ದಿಸಬೇಕೆಂಬುದು ಈ ಯೊಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿರಾಜ್ ಹೆಗ್ಡೆ ವಹಿಸಿದ್ದರು, ಜಯಶೇಖರ್ ಮೋಸೆಸ್, ಶಶಿದರ್ ಹೆಗ್ಡೆ, ಡೇಟ್ರುಡ್ ವೇಗಸ್, ಬಿ.ವಿ.ಸತ್ಯನಾರಾಯಣ, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಶಾಲೆಯ ಪ್ರಾಂಶುಪಾಲರಾದ ನೇತ್ರಾವತಿ, ರಾಧಕೃಷ್ಣ, ಪಶುಸಂಗೋಪ ನಿರ್ದೇಶಕ ಹಲಗಪ್ಪ, ಜಯಂತಿ, ಮೋದಲಾದವರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English