ಮಂಗಳೂರು: ವಿಜಯ ಬ್ಯಾಂಕ್ ನ ಮಾಜಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಬಿ.ಬಿ. ಶೆಟ್ಟಿ (77) ಅವರು ಜುಲೈ 2 ಶುಕ್ರವಾರ ಮಧ್ಯರಾತ್ರಿ ನಿಧನರಾದರು.
ಬಿ.ಬಿ. ಶೆಟ್ಟಿ ಅವರು ಪತ್ನಿ ಕಲಾವತಿ ಸಹೋದರ ಸುಬ್ಬಯ್ಯ ಶೆಟ್ಟಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬಿ.ಬಿ. ಶೆಟ್ಟಿ ಅವರು 1975ರ ಡಿಸೆಂಬರ್ ನಲ್ಲಿ ಆಡಳಿತ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಶೆಟ್ಟಿ ಅವರು ವಿಜಯ್ ಬ್ಯಾಂಕ್ ಗೆ ಸೇರಿದ್ದರು. 1992ರಿಂದ 1996ರ ತನಕ ವಿಜಯ ಬ್ಯಾಂಕ್ ನ ಆಡಳಿತ ನಿರ್ದೇಶಕರಾಗಿದ್ದರು. 1984ರ ಅಕ್ಟೋಬರ್ ನಲ್ಲಿ ಅವರು ಜನರಲ್ ಮ್ಯಾನೇಜರ್ ಹುದ್ದೆಗೆ ಭಡ್ತಿ ಹೊಂದಿದ್ದರು. 1989ರಲ್ಲಿ ಅವರು ಇಂಡಿಯನ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1992ರ ತನಕ ಈ ಹುದ್ದೆಯಲ್ಲಿದ್ದರು.
ಸೆಂಟ್ರಲ್ ಬ್ಯಾಂಕ್ ನಲ್ಲಿ ಯೋಜನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಆರ್ಥಿಕತಜ್ಞರಾಗಿ ಕೆಲಸ ಮಾಡಿದ್ದರು. ಮುಂಬಯಿ ವಿಶ್ವ ವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ರಾಷ್ಟ್ರೀಯ ಮಂಡಳಿ ಮತ್ತು ಮುಂಬಯಿಯ ಫೈನಾನ್ಸಿಯಲ್ ಎಕ್ಸ್ ಪ್ರೆಸ್ ನ ಹಣಕಾಸು ವರದಿಗಾರನಾಗಿದ್ದರು.
ಶೆಟ್ಟಿ ಅವರು ಸಿಎಐಐಬಿ ಪರೀಕ್ಷೆಯ ಪರೀಕ್ಷಕನಾಗಿದ್ದರು. ಬ್ಯಾಂಕ್ ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಭಾರತ ಮತ್ತು ವಿದೇಶದಲ್ಲಿ ಅವರು ತರಬೇತಿಯನ್ನು ಪಡೆದುಕೊಂಡಿದ್ದರು. ಪಶ್ಚಿಮ ಜರ್ಮನಿ ಮತ್ತು ಬಾರ್ಕ್ಲೇಸ್ ನಲ್ಲಿ ಅವರು ಜರ್ಮನ್ ಬ್ಯಾಂಕ್ ನಲ್ಲಿ ಅವರು ತರಬೇತಿ ಮತ್ತು ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಅವರ ಸೋದರ ಸುಬ್ಬಯ್ಯ ಶೆಟ್ಟಿ ಅವರು ಕರ್ನಾಟಕ ಸರ್ಕಾರದ ಮಾಜಿ ಸಚಿವರಾಗಿದ್ದವರು.
Click this button or press Ctrl+G to toggle between Kannada and English