ವಿಟ್ಲ : ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜುಲೈ 3, ಶನಿವಾರ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸ್ವಾಮೀಜಿಯವರ 53ನೇ ಜನ್ಮದಿನೋತ್ಸವ ಮತ್ತು ಗ್ರಾಮೋತ್ಸವ ನಡೆಯಿತು.
ಜನ್ಮದಿನೋತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಪ್ರಕೃತಿ ಸಂರಕ್ಷಣೆ, ಗೋ ಸಂರಕ್ಷಣೆಗಳಿಂದ. ಮಾನವ ಸಂಪತ್ತು ಸದ್ಬಳಕೆಯಿಂದ ಗ್ರಾಮಗಳ ವಿಕಾಸವಾಗುವುದು. ಸಂಸ್ಕಾರ, ಜ್ಞಾನ, ಭಕ್ತಿ, ಶ್ರದ್ಧೆಗಳಿಂದ ಭಗವಂತನ ಆರಾಧನೆ ಮಾಡಬೇಕು ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಇದೇ ಸಂದರ್ಭ ಅವರು ಗ್ರಾಮೋತ್ಸವಕ್ಕೆ ಚಾಲನೆ ನೀಡಿದರು.
ವಿಶ್ವಮಾನವ ಧರ್ಮದ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣ ಸಾಧ್ಯ.ಆತ್ಮೋನ್ನತಿಗಾಗಿ ಆದ್ಯಾತ್ಮಿಕ ಸಂಪತ್ತಿನ ಕ್ರೋಡೀಕರಣವಾಗಬೇಕು. ಸಾಮಾಜಿಕ ಚಿಂತನೆಯ ಮನೋಭಾವ ಹೆಚ್ಚಬೇಕಾಗಿದೆ ಎಂದು ವಿಶೇಷ ಸಂದೇಶ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರು ಗುರುಪೂಜೆ, ಶ್ರೀ ಗುರು ಪಾದುಕಾರಾಧನೆ ನೆರವೇರಿಸಿದರು. ಶ್ರೀ ಗುರುಭಕ್ತರಿಂದ ಶ್ರೀಗಳಿಗೆ ಅಕ್ಕಿಮುಡಿಯಲ್ಲಿ ತುಲಾಭಾರ ಸೇವೆ ಮತ್ತು ಜನ್ಮದಿನೋತ್ಸವದ ಅಂಗವಾಗಿ ಉಯ್ಯಾಲೆ ಸೇವೆಯನ್ನು ಸಲ್ಲಿಸಲಾಯಿತು.
ಒಡಿಯೂರು, ಮುಂಬೈ, ಮಂಗಳೂರು ಮೊದಲಾದ ಕಡೆಗಳ ಶ್ರೀ ಗುರುದೇವ ಸೇವಾ ಬಳಗಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರಗಳು, ಶ್ರೀ ಗುರುದೇವ ವಿದ್ಯಾ ಪೀಠ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಶ್ರೀ ಗುರುದೇವ ಗ್ರಾಮ ವಿಕಾಸ ಕೇಂದ್ರದ ವಿವಿಧ ಗ್ರಾಮಗಳ ಗ್ರಾಮ ಸಮಿತಿಗಳು, ಘಟ ಸಮಿತಿಗಳು, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು.
ಸ್ವಾಮೀಜಿಯವರಿಗೆ ಜನ್ಮದಿನೋತ್ಸವದ ಅಂಗವಾಗಿ ಅಕ್ಕಿಮುಡಿಯಲ್ಲಿ ತುಲಾಭಾರ ಸೇವೆ ಸಲ್ಲಿಸಲಾಯಿತು.
Click this button or press Ctrl+G to toggle between Kannada and English