ಮಂಗಳೂರು: ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಉರ್ವಾ ಸಮುದಾಯಭವನದಲ್ಲಿ ನವೆಂಬರ್ 8 ರಿಂದ ಮೂರು ದಿನಗಳ ಕಾಲ ನಡೆದ ಉದ್ಯೋಗಿನಿ ಮಾಹಿತಿ ಶಿಬಿರದ ಸಮಾರೋಪ ಇಂದು ಸಂಜೆ ನಡೆಯಿತು.
ಸಮಾರೋಪ ಭಾಷಣದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಕೌಶಲ್ ರವರು ನಮ್ಮ ಬ್ಯಾಂಕ್ ಸಂಘಟನೆಗಳ ಮೂಲಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ನಿರತರಾದ ಕಾರ್ಯಕರ್ತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಉದ್ಯೋಗಿನಿ ಮೂಲಕ ನಮ್ಮ ಶಾಖೆ ಪರಶಿಷ್ಟರಿಗೆ ಉದ್ಯೋಗ ನೀಡಲು ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ 80 ಜನ ಮಹಿಳೆಯರು ಪಾಲ್ಗೊಂಡಿದ್ದು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸಾಲಗಳ ಬಗ್ಗೆ ಮಾಹಿತಿ ಪಡೆದರು.
ಸಮಾರೋಪ ಕಾರ್ಯಕ್ರಮದಲ್ಲಿ, ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಇಲಾಖೆಯ ಅಭಿವೃದ್ದಿ ನಿರೀಕ್ಷರಾದ ಚಂದ್ರಿಕಾ, ಟ್ರಸ್ಟ್ ನ ಅಧ್ಯಕ್ಷ ಮೋಹನಾಂಗಯ್ಯ ಉಪಸ್ಥಿತರಿದ್ದರು. ಗಂಗಾಧರ ಪಡುಬಿದ್ರಿ ಸ್ವಾಗತಿಸಿದರು.
Click this button or press Ctrl+G to toggle between Kannada and English