ಗೋ ಹಂತಕರ ಮತ್ತು ದನಗಳ ಡಕಾಯಿತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಮೋನಪ್ಪ ಭಂಡಾರಿ

8:59 PM, Tuesday, August 6th, 2013
Share
1 Star2 Stars3 Stars4 Stars5 Stars
(5 rating, 6 votes)
Loading...

Monappa Bhandaryಮಂಗಳೂರು :  ಗೋ ಹತ್ಯೆ ಮತ್ತು ದನಗಳ ಡಕಾಯಿತು ಸಂಖ್ಯೆ ಜಾಸ್ತಿಯಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಗೋ ಹತ್ಯೆ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಸಭೆ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.

ಅವರು ಇಂದು ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಈ ಮಾತನ್ನು ಹೇಳಿದರು, ಸಂವಿದಾನದ ಪರಿಚ್ಚೇದ 44 ರ ಆಶಯದಂತೆ 64 ರ  ಗೋ ಹತ್ಯೆ ನಿಷೇಧ ಮಸೂದೆಗೆ ತಿದ್ದುಪಡಿ ತಂದು ಕಾಂಗ್ರೆಸ್ ಸರಕಾರ ಗೋ ಹತ್ಯೆ ನಿಷೇಧ ಕುರಿತಾದ 64 ರ ಮಸೂದೆಯ ಒಲವಿನಿಂದ ರಾಜ್ಯದ ಗೋ ಸಂಪತ್ತಿಗೆ ಮಾರಕವಾಗಿದೆ. ಆದರೆ ಗೋ ಹಂತಕರಿಗೆ ಮತ್ತು ದನಗಳ ಡಕಾಯಿತಿ ಮಾಡುವವರಿಗೆ ಇದು ವರವಾಗಿ ಪರಿಣಮಿಸಿದೆ  ಇದಕ್ಕೆ ಅಧಿಕಾರದಲ್ಲಿರುವ ಪ್ರಭಾವಿ ರಾಜಕಾರಣಿಗಳೇ ಕಾರಣರಾಗಿದ್ದಾರೆ ಎಂದರು.

ಗೋ ಹತ್ಯೆಗೆ ಪೊಲೀಸ್ ವೈಫಲ್ಯವೇ ಕಾರಣವೆಂದು ಯುಟಿ ಖಾದರ್ ಹೇಳಿಕೆ ನೀಡಿದ್ದು, ಸರಿಯಾಗಿ ತನಿಖೆ ನಡೆಸಬೇಕೆಂದು  ಮಂಗಳೂರು ಕಮಿಷನರ್‌ಗೆ ಮನವಿ ಪತ್ರ ನೀಡಿದ್ದರು. ಆದರೆ ಸಚಿವರೆ, ಗೋ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಅಡ್ಡವಾಗಿದ್ದಾರೆ. ಈ ರೀತಿ ಮನವಿ ನೀಡಿ ಪ್ರಚಾರ ಗಿಟ್ಟಿಸಿಕೊಂಡು ಜನರಿಗೆ ಮೊಸಮಾಡುತ್ತಿದ್ದಾರೆ. ಈ ತರಹ ಬಾಷಣ ಮಾಡಿ ಏನೂ ಪ್ರಯೋಜನವಿಲ್ಲ, ಬದಲಿಗೆ ನೀವು ನೀಡಿದ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಆರು ರಾಜಕಾರಣಿಗಳಿದ್ದು ಸಹ ಗೋ ಹತ್ಯೆ ಇನ್ನೂ ತಡೆಯಲಾಗಲಿಲ್ಲ. ಇದು ನಾಚಿಕೆಯ ಸಂಗತಿ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಗೋ ಹಂತಕರ ಮತ್ತು ದನಗಳ ಡಕಾಯಿತಿ ಮಾಡುತ್ತಿರುವ ಸಮಾಜಘಾತುಕರ ಮೇಲೆ 64 ರ ಮಸೂದೆಯಲ್ಲಿರುವ ಅವಕಾಶಗಳನ್ನು ಉಪಯೋಗಿಸಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೂ ಎರಡು ಜಿಲ್ಲೆಗಳಲ್ಲಿ ತಲೆ ಎತ್ತಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿ ಸಂಬಂಧಪಟ್ಟವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಾಧ್ಯಕ್ಷೆ ಪುಷ್ಪಲತಾ ಯು.ಕೆ., ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹಾಗೂ ಬಿಜೆಪಿಯ ಜಿಲ್ಲಾ ಮಾದ್ಯಮ ಪ್ರಮುಖ್ ರಾಜ್‌ಗೋಪಾಲ್ ರೈ ಉಪಸ್ಥಿತರಿದ್ದರು.
ದ್ದು ಇದಕ್ಕೆ ಅಧಿಕಾರದಲ್ಲಿರುವ ಪ್ರಭಾವಿ ರಾಜಕಾರಣಿಗಳೇ ಕಾರಣರಾಗಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English