ಮಂಗಳೂರು: ಪಾಕಿಸ್ಥಾನದ ಉಗ್ರರು ಭಾರತದ ಸೈನಿಕರ ಮೇಲೆ ದಾಳಿ ನಡೆಸಿ ಐವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಆಗಸ್ಟ್ 7ರಂದು ನಗರದ ಡಿ.ಸಿ.ಆಫೀಸ್ ಬಳಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಪಾಕಿಸ್ಥಾನದ ಸೇನೆಯು ಭಾರತದ ಗಡಿಯೋಳಗೆ ನುಸುಳಿ ಇಬ್ಬರು ಭಾರತೀಯ ಸೈನಿಕರ ಶಿರಚ್ಛೇಧನ ನಡೆದರೂ ಸರಕಾರದ ನಿರ್ಲಕ್ಷದಿಂದ ಈಗ ಪುನ: ಗಡಿಯಲ್ಲಿ ಐವರು ಅಮಾಯಕ ಭಾರತೀಯ ಸೈನಿಕರು ಬಲಿಯಾಯಿತು. ಉಗವಾದಿ ಅಥವ ಪಾಕಿಸ್ಥಾನದ ಸೇನೆಯಾಗಿರಲಿ ಇದು ಪಾಕ್ ಪುರಸ್ಕೃತ ಷಡ್ಯಂತ್ರದ ಭಾಗವಾಗಿರುವುದರಿಂದ ಅದಕ್ಕೆ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಹಿಂದೂ ಜನಜಾಗ್ರತಿ ಸಮಿತಿಯ ಪ್ರಸನ್ನ ಕಾಮತ್ರವರು ಪ್ರತಿಭಟನೆಯಲ್ಲಿ ತಿಳಿಸಿದರು.
ಪಾಕಿಸ್ಥಾನವು ಭಾರತೀಯ ಚಲನಚಿತ್ರಗಳಾದ ಭಾಗ ಮಿಲ್ಕಾ ಭಾಗ್, ಎಕ್ ಥಾ ಟೈಗರ್ ಇಂತಹ ಚಲನಚಿತ್ರಗಳಿಗೆ ನಿರ್ಭಂದ ಹೇರಿದೆ. ಭಾರತದಲ್ಲಿರುವ ಪಾಕಿಸ್ಥಾನಿ ನಟಿ ವೀಣಾಮಲಿಕ್ ನಟಿಸಿದ `ಸಿಲ್ಕ್ ಸಕತ್ ಹಾಟ್ ಎಂಬ ಸೀನಿಮವನ್ನು ಕೂಡ ನಿಲ್ಲಿಸಬೇಕು ಮತ್ತು ಭಾರತದಲ್ಲಿರುವ ಪಾಕಿಸ್ಥಾನಿ ಕಲಾವಿದರನ್ನು ಹಿಂದಕ್ಕೆ ಕಳುಹಿಸಬೇಕು ಇಲ್ಲಾ ನಾವು ಕಳುಹಿಸುತ್ತೇವೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ರಾಮಸೇನೆಯ ಕಾರ್ಯಕರ್ತ ಲೊಕೇಶ, ಲೀಲಾ, ರಾಧ ಪ್ರಸಾದ್ ಮೋದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English