ಮುಸ್ಲಿಂ ಭಾಂದವರಿಂದ ಸಾಮೂಹಿಕ ನಮಾಜ್

12:11 PM, Thursday, August 8th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

feastmuslimಮಂಗಳೂರು : ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್  ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಗರದ ಲೈಟ್‌ಹೌಸ್ ಹಿಲ್ ನಲ್ಲಿನ ಈದ್ಗಾದಲ್ಲಿ ನೂರ್ ಮಸ್ಜೀದ್ ಮಸೀದಿಯಲ್ಲಿ ಇಂದು ಬೆಳಿಗ್ಗೆ ಮುಸ್ಲಿಂ ಭಾಂದವರು ಸಾಮೂಹಿಕ ನಮಾಜ್ ಮಾಡಿ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು.

feastmuslimಈದ್-ಉಲ್-ಫಿತರ್ , ಹಬ್ಬವು ರಮ್ಜಾನ್ ತಿಂಗಳ ಕೊನೆಯ ದಿನ ಆಚರಿಸಲಾಗುತ್ತದೆ. ಮುಸ್ಲಿಂ ಬಾಂಧವರು ಒಂದು  ತಿಂಗಳು ಪೂರ್ತಿ ಉಪವಾಸ ದಲ್ಲಿ ತೊಡಗಿದ್ದು  ಅನ್ನ, ನೀರು ಸಹ ಮುಟ್ಟದೇ ಉಪವಾಸ ವೃತ ಆಚರಿಸಿದ್ದರು. ಉಪವಾಸ ತಿಂಗಳಲ್ಲಿ ಉಳ್ಳವರು ಇಲ್ಲದವರಿಗೆ ಕಡ್ಡಾಯವಾಗಿ ದಾನಧರ್ಮ ಮಾಡಬೇಕಗಿದೆ. ಅರಬ್ ತಿಂಗಳಿನ 10 ನೇ ತಿಂಗಳಾದ ಶವ್ವಾಲ್ ಒಂದರಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗಿದ್ದು, ಈ ಹಬ್ಬವು ದಾನದ ಸಂಕೇತವಾಗಿದೆ. ಚಂದ್ರದರ್ಶನದ ಬಳಿಕವಷ್ಟೆ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದಂದು ಎಲ್ಲರೂ ಹೊಸ ಉಡುಪುಗಳನ್ನು ಧರಿಸಿದ್ದು, ಸುಗಂಧ ದ್ರವ್ಯವನ್ನು ಸಿಂಪಡಿಸಿಕೊಂಡು ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಮಾಡುತ್ತಾರೆ.

Eid ul Fitarಉಡುಪಿಯ ಜುಮ್ಮಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಜಿಲ್ಲಾ ಖಾಝಿ ಶೈಕುನ್ಹ ತ್ವಾಕ ಅಹಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಒಟ್ಟುಗೂಡಿದ ಮುಸ್ಲಿಮ್ ಬಾಂಧವರು ನಮಾಝ್ ಮಾಡುವ ಮೂಲಕ ಪ್ರಾರ್ಥನೆಯನ್ನು ನೆರವೇರಿಸಿದರು.Eid ul Fitar

Eid ul Fitar

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English