ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ ನಿಧನ

3:08 PM, Thursday, August 8th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Kurunji Venkataramana Gowdaಸುಳ್ಯ : ಶಿಕ್ಷಣ ಕ್ಷೇತ್ರದ ಹರಿಕಾರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಸ್ಥಾಪಕಾಧ್ಯಕ್ಷ, ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ(85) ಆ. 7ರಂದು ಸಂಜೆಯ ವೇಳೆಗೆ  ಶ್ರೀರಾಂಪೇಟೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ವಿದ್ಯಾ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ದ.ಕ ಮತ್ತು  ಕೊಡಗು ಜಿಲ್ಲೆಗಳ ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಿಗೆ  ಉಕ್ಕಿನ ಕವಾಟು ಹಾಗೂ ಆಂಗ್ಲ  ಭಾಷಾ ಪುಸ್ತಕಗಳನ್ನು ಉಚಿತವಾಗಿ ನೀಡಿ, ಆಂಗ್ಲ ಭಾಷಾ ಗ್ರಂಥಾಲಯವನ್ನು ನಿರ್ಮಿಸಿದವರು.

ಸಮಾಜದೊಂದಿಗೆ ತನ್ನ ಸಂಪತ್ತನ್ನು ಉದಾರವಾಗಿ ಹಂಚಿಕೊಂಡಾಗ ಮಾತ್ರ ಅದರ ನೈಜ ಮೌಲ್ಯ ಅರಿವಾಗುವುದು ಎಂಬ ಚಿಂತನೆಯನ್ನು ಡಾ| ಕುರುಂಜಿ ವೆಂಕಟ್ರಮಣ ಗೌಡರು ಹೊಂದಿದ್ದರು.

ಉದಾತ್ತ ಗುರಿ, ಕೈಗೊಳ್ಳುವ ಕಾರ್ಯಶಕ್ತಿ, ಸಚ್ಚಾರಿತ್ರ್ಯ, ಔದಾರ್ಯ, ಇತರರಿಗೆ ಮಾದರಿಯಾಗುವ ವ್ಯಕ್ತಿತ್ವ, ಅದಮ್ಯ ಜೀವನೋತ್ಸಾಹ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಮನೋಭಾವ ಹೀಗೆ ಡಾ| ಕುರುಂಜಿ ವೆಂಕಟ್ರಮಣ ಗೌಡರ ವ್ಯಕ್ತಿತ್ವ ಚಿತ್ರಣ ಬಿಚ್ಚಿಕೊಳ್ಳುತ್ತದೆ.

ಪುತ್ರರಾದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಉಪಾಧ್ಯಕ್ಷ ಡಾ| ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾಪ್ರಸಾದ್‌ ಕೆ.ವಿ. ಮತ್ತು  ಪುತ್ರಿ ಗೋವರ್ಧಿನಿ ಜಯಕುಮಾರ, ಸೊಸೆಯಂದಿರಾದ ಅಕಾಡೆಮಿ ನಿರ್ದೇಶಕಿ ಶೋಭಾ ಚಿದಾನಂದ ಹಾಗೂ ನಿರ್ದೇಶಕಿ ಡಾ| ಜ್ಯೋತಿ ರೇಣುಕಾಪ್ರಸಾದ್‌ ಅವರನ್ನು ಅಗಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English