ಮಂಗಳೂರು: ಕರಕುಶಲ ವಸ್ತುಗಳ ಅಭಿವೃದ್ಧಿ ಇಲಾಖೆ ಆಂಧ್ರಪ್ರದೇಶ ಇದರ ವತಿಯಿಂದ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ನಡೆಯುವ ಕೈ ಮಗ್ಗ, ಕರಕುಶಲ ಹಾಗೂ ಆಟಿಕೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಂಗಳೂರಿನ ನಗರಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಇಂದು ಬೆಳಿಗ್ಗೆ ಉದ್ಘಾಟಿಸಿದರು.
ಕರಕುಶಲ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಅಭಿವೃದ್ಧಿಸುವ ಉದ್ದೇಶದಿಂದ ಆಂದ್ರ ಕರಕುಶಲ ಮತ್ತು ಕೈ ಮಗ್ಗ ಇಲಾಖೆ ಪ್ರತಿ ವರ್ಷದ ದೇಶದ ಅನೇಕ ಕಡೆಗಳಲ್ಲಿ ವಸ್ತು ಪ್ರದರ್ಶನ ನಡೆಸುತ್ತಿದ್ದು ಇದರಿಂದ ಕರಕುಶಲ ಹಾಗೂ ಕೈ ಮಗ್ಗ ಉತ್ಪನ್ನಗಳಿಗೆ ಬೇಡಿಕೆ ಬಂದಿದ್ದು ಉತ್ಪಾದಕರು ಹೆಚ್ಚು ಲಾಭಗಳಿಸಿದ್ದಾರೆ ಎಂದು ಕರಕುಶಲ ಅಭಿವೃದ್ದಿ ಇಲಾಖೆಯ ಪರಿವೀಕ್ಷಕರಾದ ಜಾಕೋಬ್ ಡಿ ಸೋಜ ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಲೇಪಾಕ್ಷಿ ಕರಕುಶಲ ಮಳಿಗೆಯ ಕೆ,ವಿ ಸುಬ್ಬಣ್ಣ, ವುಡ್ ಲ್ಯಾಂಡ್ಸ್ ಹೋಟೇಲ್ನ ಮೆನೇಜರ್ ರಮೇಶ್ ಭಟ್ ಉಪಸ್ಥಿತರಿದ್ದರು. ಪ್ರದರ್ಶನದಲ್ಲಿ 50 ಮಳಿಗೆಗಳಲ್ಲಿ ಎಂಬ್ರಾಯಿಡರ್ ಬಟ್ಟೆ ಬರೆಗಳು, ಆಟಿಕೆಗಳು, ಕರಕುಶಲ ವಸ್ತುಗಳು ಆಂಧ್ರದ ವಿವಿಧ ಮೂಲೆಗಳಿಂದ ಭಾಗವಹಿಸಿದೆ.
Click this button or press Ctrl+G to toggle between Kannada and English