ಮಂಗಳೂರು: ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರೇಟ್ಸ್ ಈ ಸಂಸ್ಥೆಯ ವತಿಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರೆಸಿಡೆಂಟ್ ಕೋರಗಪ್ಪ ಮೇಮೋರಿಯಲ್ ಹಾಲ್ ಕುದ್ರೋಳಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.
ವಿದ್ಯಾರ್ಥಿವೇತನ ಪಡೆಯಲು ಅರ್ಜಿಗಳ ಮಹಾಪೂರವೇ ಬಂದಿದ್ದು ಅದರಲ್ಲಿ 225 ಅರ್ಹ ವಿದ್ಯಾರ್ಥಿಗಳನ್ನು ಆರಿಸುವಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುತ್ತದೆ. ಅದಲ್ಲದೆ 8 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 14 ಮಂದಿ ಅನಾರೋಗ್ಯ ಪೀಡಿತರಿಗೆ ಸಹಾಯಧನವಾಗಿ ಒಟ್ಟು 12ಲಕ್ಷ ಹಣವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಎಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರೇಟ್ಸ್ ನ ಅಧ್ಯಕ್ಷರಾದ ಜೀತೇಂದ್ರ ಸುವರ್ಣರವರು ಶುಕ್ರವಾರದಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು.
ಈ ಸಮಾರಂಭದಲ್ಲಿ ಮಾಜಿ ಕೇಂದ್ರ ಮಂತ್ರಿ ಬಿ. ಜನಾರ್ದನ ಪೂಜಾರಿ, ವಿಧಾನ ಸಭಾ ಸದಸ್ಯರಾದ ಕೆ.ವಸಂತ ಬಂಗೇರ, ಶ್ರೀ ಗೋಕರ್ಣ ಕ್ಷೇತ್ರ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಂ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಸದಾನಂದ ಸುವರ್ಣ, ಇವರೆಲ್ಲ ಭಾಗವಹಿಸುವರು. ಎಂದರು.
ಪತ್ರಿಕಾಘೋಷ್ಟಿಯಲ್ಲಿ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರೇಟ್ಸ್ ನ ಪ್ರದಾನ ಕಾರ್ಯದರ್ಶಿ ಸುಧಾಕರ ಪೂಜಾರಿ, ಮತ್ತೋಬ್ಬ ಕಾರ್ಯದರ್ಶಿ ಉದಯ ಕುಮಾರ್ ಕಟೀಲ್, ಲೆಕ್ಕ ಪರಿಶೋಧಕ ವಿಠಲ್ ಪೂಜಾರಿ, ಕೋಶಧಿಕಾರಿ ಪ್ರಭಾಕರ್ ಸುವರ್ಣ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English