ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆಯಾಗಬೇಕು : ಹರಿಕೃಷ್ಣ ಪುನರೂರು

8:58 PM, Monday, August 12th, 2013
Share
1 Star2 Stars3 Stars4 Stars5 Stars
(5 rating, 7 votes)
Loading...

Harikrishna Punarooruಮಂಗಳೂರು: ತುಳುನಾಡು ಟ್ರಸ್ಟ್ ನೇತೃತ್ವದಲ್ಲಿ ದ.ಕ. ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ತುಳು ಸಂಘಟನೆಗಳ ಪದಾಧಿಕಾರಿಗಳಿಂದ ಶನಿವಾರ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಂಭಾಗಣದಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ಈ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೆತ್ತಿಗೋಳ್ಳಲಾಯಿತು.

ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುಭಾಷೆಯನ್ನು ಸೇರ್ಪಡೆಗೋಳಿಸಬೇಕು, ಅದಲ್ಲದೆ ಪ್ರತ್ಯೇಕ ತುಳುರಾಜ್ಯದ ಬೇಡಿಕೆಯನ್ನು ಈಡೇರಿಸಬೇಕು ಇವು ಪೂರ್ವಭಾವಿ ಸಭೆಯಲ್ಲಿ ಕೈಗೆತ್ತಿಕ್ಕೊಂಡ ಪ್ರಮುಖ ನಿಣರ್ಾಯಗಳು. ಸೆಪ್ಟೆಂಬರ್ 7ರಂದು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿಯವರ ಕಛೇರಿಯವರೆಗೆ ಬೃಹತ್ ಮೆರವಣಿಗೆ ನಡೆಸುವ ತಿಮರ್ಾನಕ್ಕೆ ಬರಲಾಯಿತು. ತುಳುನಾಡಿನ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಹಿರಿಯ ಕಲಾವಿದರು, ಸಾಹಿತಿಗಳು, ಸ್ವಾಮೀಜಿಗಳು, ವೈದ್ಯರು, ಕೃಷಿಕರು, ಹೀಗೆ ಎಲ್ಲರ ಸಹಕಾರದೋಂದಿಗೆ ಭಾರಿ ಜನಸಂಖ್ಯೆಯನ್ನು ಒಗ್ಗೂಡಿಸಿ ಮೆರವಣಿಗೆಯನ್ನು ನಡೆಸಲು ತೀಮರ್ಾನಿಸಲಾಗಿದೆ.

Harikrishna Punarooruಭಾರಿ ಕೈಗಾರಿಕೆಗಳು ಬಂದಾಗ ಒಟ್ಟಾಗಿ ಹೋರಾಡದ ಕಾರಣ ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಭಾರಿ ಕೈಗಾರಿಕೆಗಳಿಂದ ವಿಷ, ಧೂಳಿನಿಂದ ಪರಿಸರ ಹಾಳಾಗುತ್ತಿದೆ,ಸಸ್ಯ ಮತ್ತು ಮತ್ಸ್ಯ ಸಂಪತ್ತು ನಾಶವಾಗುತ್ತಿದೆ. ಗೋವಾ, ಪಾಂಡೀಚೇರಿಯಂತಹ ಸಣ್ಣ ಪ್ರದೇಶಗಳು ಪ್ರತ್ಯೇಕ ರಾಜ್ಯಗಳಾಗಿವೆ. ತುಳುವರು ಹೋರಾಟ ಮಾಡದ ಕಾರಣ ತುಳುನಾಡನ್ನು ಕಳೆದುಕೋಳ್ಳುತ್ತಿದ್ದೇವೆ. ಇನ್ನಾದರೂ ಪ್ರತ್ಯೇಕ ತುಳುನಾಡಿಗೋಸ್ಕರ ಹೋರಾಟ ನಡೆಸಬೇಕು ಎಂದು ತುಳುನಾಡು ಟ್ರಸ್ಟ್ ನ ಮುಖಂಡ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.

ತುಳುನಾಡು ಪರಾಶುರಾಮನ ಸೃಷ್ಟಿಯಾಗಿದೆ, ನಮ್ಮ ಹಿರಿಯರ ಕಾಲದಲ್ಲಿ ಈ ನೆಲದಲ್ಲಿ ಅಮೃತ ಪ್ರಾಶನವಾಗುತ್ತಿದ್ದರೆ, ಇದೀಗ ಕೈಗಾರಿಕೆಗಳಿಂದ ವಿಷ ಪ್ರಾಶನವಾಗುತ್ತಿದೆ. ದೇವರಿಗೆ ಅಭಿಷೇಕ ಮಾಡುವ ಪುಣ್ಯಕೆರೆಯ ನೀರೂ ವಿಷವಾಗುತ್ತಿದೆ ಎಂದು ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ತಿಳಿಸಿದರು.

Harikrishna Punarooruಸಭೆಯಲ್ಲಿ  ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಸರೋಜಿನಿ ಶೆಟ್ಟಿ, ಕೆ.ಎನ್.ಟೈಲರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಹೈದರ್ ಪರ್ತಿಪಾಡಿ, ಅಶೋಕ್ ಶೆಟ್ಟಿ ಸರಪಾಡಿ, ರವಿ ಅಲೆವೂರ್, ಸಂತೋಷ್ ಕುಮಾರ್ ರೈ ಬೋಳಿಯಾರು, ವಿಜಯಕುಮಾರ್ ಕೊಡಿಯಲ್ ಬೈಲ್ ಪಾಲ್ಗೊಂಡಿದ್ದರು.

Harikrishna Punarooru

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English