ಮಂಗಳೂರು : ಸನಾತನ ಸಂಸ್ಕೃತಿಯಂತೆ ನಾಗರಮಂಚಮಿ ಹಬ್ಬವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ನಾಗರಪಂಚಮಿಯು ಮನೆ ಮನೆಗಳಲ್ಲಿ, ಪ್ರಕೃತಿಯ ಮಡಿಲ ಬನಗಳಲ್ಲಿ, ದೇವಾಲಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ತಿಂಗಳಿನ ಉಜ್ವಲ ಪಕ್ಷದ ಐದನೆಯ ದಿನವು ನಾಗರಪಂಚಮಿಯ ದಿನವಾಗಿದೆ. ಈ ಹಬ್ಬವನ್ನು ನಾಡಿನ ಜನರು ಭಕ್ತಿಯಿಂದ ಆಚರಿಸುತ್ತಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಜನರು ಸರ್ಪದೇವರಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ. ನಾಗರಪಂಚಮಿಯ ದಿನದಂದು ಭಕ್ತಾಧಿಗಳಿಲ್ಲರೂ ಬೆಳಿಗ್ಗೆ ಎದ್ದು ನಾಗನಗುಡಿಗೆ ಹೋಗಿ ಸಿಯಾಳಭಿಷೇಕ ಮಾಡಿ ಹಾಲೆರೆಯುತ್ತಾರೆ. ಭಕ್ತರು ನಾಗದೇವನಿಗೆ ಇಷ್ಟವಾದಂತಹ ಕೇದಗೆ, ಸಂಪಿಗೆ, ಹಿಂಗಾರದಂತಹ ಹೂವನ್ನು ಪೂಜೆಗೆ ಸಮರ್ಪಿಸುತ್ತಾರೆ.
ಇನ್ನು ಕೆಲವರು ನಾಗರಪಂಚಮಿಯನ್ನು ಶ್ರೀ ಕೃಷ್ಭನು ಕಾಳಿಂಗಸರ್ಪವನ್ನು ಮಣಿಸಿದ ವಿಜಯದ ದಿನವನ್ನಾಗಿ ಆಚರಿಸುತ್ತಾರೆ. ನಾಗರಮಂಚಮಿ ದಿನದಂದು ಮಾಡಿದ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಬಂದ ಭಕ್ತಾದಿಗಳಿಗೆ ಹಂಚುತ್ತಾರೆ. ಅದೇ ದಿನ ಸಂಜೆ ಅರಸಿನ ಎಲೆಯ ತಿಂಡಿ ಮಾಡುತ್ತಾರೆ, ಇದು ನಾಗರ ಪಂಚಮಿಯ ದಿನದ ವಿಶೇಷವಾಗಿದೆ.
ಶ್ರೀ ಮಂಗಳಾದೇವಿ ದೇವಸ್ಥಾನ, ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಶ್ರೀ ಕದ್ರಿ ಮಂಜುನಾಥ ದೇವಸ್ಥಾನ, ಶ್ರೀ ಕುಡುಪು ಅನಂತ ಪದ್ಮನಾಭ ದೇವಸ್ಥಾನ, ಉರ್ವ ಶ್ರೀ ಮರಿಯಮ್ಮ ದೇವಸ್ಥಾನ, ಕಾರ್ಸ್ಟ್ರೀಟ್ ಶ್ರೀ ಕಾಳಿಕಾಂಬ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನ, ಹೀಗೆ ನಗರದ ವಿವಿದೆಡೆಗಳಲ್ಲಿ ಭಕ್ತಾಧಿಗಳು ನಾಗರ ಶಿಲೆಗೆ ಹಾಲು, ಬೊಂಡ, ಅರಿಸಿನ, ಪಂಚಾಮೃತದ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
Click this button or press Ctrl+G to toggle between Kannada and English