ಮಂಗಳೂರು : ಭ್ರಷ್ಟ ಕೇಂದ್ರ ಸರಕಾರವನ್ನು ವಜಾಗೊಳಿಸಬೆಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಆಗಸ್ಟ್ 13 ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಕೇಂದ್ರ ಸರಕಾರವು ಅತ್ಯಂತ ಭ್ರಷ್ಟ ಸರಕಾರವೆಂದು ಎ.ಬಿ.ವಿ.ಪಿ. ಭಾವಿಸುತ್ತದೆ. ಕೇಂದ್ರದ ಯು.ಪಿ.ಎ. ಸರಕಾರವು ಹಲವಾರು ಹಗರಣಗಳ ಮೂಲಕ ಸರಿ ಸುಮಾರು 12 ಲಕ್ಷ ಕೋಟಿಗೂ ಮೀರಿ ಭ್ರಷ್ಟಚಾರವನ್ನು ಮಾಡಿರುವುದು ಸಾಬೀತಾಗಿದೆ.
ಕೇಂದ್ರ ಸರಕಾರವು ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದು ರೂಪಾಯಿ ಮೌಲ್ಯವು ನಿರಂತರ ಕುಸಿಯುತ್ತಿದೆ. ಶಿಕ್ಕಣ ಕ್ಷೇತ್ರದಲ್ಲಿ ನಡೆಯುವ ವ್ಯಾಪರೀಕರಣ ಮತ್ತು ಭ್ರಷ್ಟಚಾರಕ್ಕೆ ಕೇಂದ್ರ ಸರಕಾರವು ನೇರ ಹೊಣೆಯಾಗಿದ್ದು, ಕೇಂದ್ರಸರಕಾರದ ಈ ಭ್ರಷ್ಟಚಾರವನ್ನು ವಿರೋದಿಸಿ ಎ.ಬಿ.ವಿ.ಪಿ. ಕಳೆದ ಮೂರು ವರ್ಷಗಳಿಂದ ಸಂಸತ್ ಭವನದ ವರೆಗೆ ನಿರಂತರ ಸಂಘರ್ಷ ನಡೆಸುತ್ತಾ ಬಂದಿದೆ. ದೇಶದ ಆರ್ಥಿಕ ನಷ್ಟಕ್ಕೆ ಕೇಂದ್ರ ಸರಕಾರದ ಬೇಜಾವಾಬ್ದಾರಿ, ಭ್ರಷ್ಟಚಾರ ಕಾರಣವಾಗಿದೆ. ಇದರಿಂದಾಗಿ ಜನಸಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಎ.ಬಿ.ವಿ.ಪಿ.ಯ ರಾಜ್ಯ ಕಾರ್ಯದರ್ಶಿಯಾದ ರಮೇಶ್ ತಿಳಿಸಿದರು.
ವಿದೇಶದಲ್ಲಿರುವ ಕಪ್ಪುಹಣ ಮರಳಿ ಭಾರತಕ್ಕೆ ಬರಬೇಕು, ಭ್ರಷ್ಟಚಾರಿಗಳ ಹೆಸರುಗಳನ್ನು ದೇಶದ ಮುಂದೆ ಬಹಿರಂಗಗೊಳಿಸಬೇಕು, ನ್ಯಾಯಾಂಗ ಮತ್ತು ಆಡಳಿತದಲ್ಲಿ ಸುಧಾರಣೆಯಾಗಬೇಕು, ಪೋಲಿಸ್ ಮತ್ತು ಶಿಕ್ಕಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ ಎಂದು ಹೇಳಿದರು.
Click this button or press Ctrl+G to toggle between Kannada and English