ಮಂಗಳೂರು: ಇನ್ಸಿಟ್ಯೂಟ್ ಆಫ್ ಫೈರ್ ಎಂಡ್ ಸೇಫ್ಟಿ ಇಂಜಿನಿಯರಿಂಗ್ ವತಿಯಿಂದ ಅಪಘಾತದಿಂದ ರಕ್ಷಣೆಯ ಕುರಿತಾದ ಕಾರ್ಯಗಾರದ ಉದ್ಘಾಟನೆಯನ್ನು ಇಂದು ಬೆಳಗ್ಗೆ ಬಲ್ಮಠದಲ್ಲಿರುವ ಸಹೋದಯ ಸಭಾಭವನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಟಿ.ಸಿ. ಶಿವಶಂಕರ್ ಮೂರ್ತಿ ನೆರವೇರಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು ಅಪಘಾತದಿಂದ ಸಂರಕ್ಷತೆಯ ಪಾಠವನ್ನು ಕಲಿಯಬೇಡಿ, ಇದು ಪ್ರಚಲಿತದಲ್ಲಿರುವ ನಾಣ್ಣುಡಿ, ಪ್ರತೀ 10 ಅಪಘಾತಗಳಲ್ಲಿ 9 ಮನುಷ್ಯನ ಅಜಾಗರುಕತೆಯಿಂದ ಸಂಭವಿಸುತ್ತದೆ. ಅಪಘಾತಗಳೆಂದರೆ ಅದು ರಸ್ತೆಗೆ ಮಾತ್ರ ಸೀಮಿತವಲ್ಲ. ಅಮೇರಿಕಾದಲ್ಲಿ ರಸ್ತೆ ಅಪಘಾತವು ಅತೀ ದೊಡ್ಡ ಸಾವಿನ ಕಾರಣವಾಗಿದ್ದರೆ ಭಾರತದಲ್ಲಿ ಅದು ನೀರಿಗೆ ಸಲ್ಲುತ್ತದೆ. ನೀರಿನಲ್ಲಿ ಮುಳುಗಿ ಸಾಯುವವರ ಸಂಖ್ಯೆ ರಸ್ತೆ ಅಪಘಾತದಲ್ಲಿ ಸಾಯುವವರಿಗಿಂತ ಜಾಸ್ತಿಯಿದೆ. ಅದೇ ರೀತಿ ಬೆಂಕಿಯಿಂದ, ಸಿಡಿಲಿನಿಂದ ಜನ ಅಕಾಲ ಮರಣವನ್ನಪ್ಪುತ್ತಾರೆ. ಇಂತಹ ಅಪಘಾತಗಳಲ್ಲಿ ಸಾವು, ನೋವಿಗೆ ಗುರಿಯಾಗುವವರು ಅಧಿಕವಾಗಿ ಯುವ ಜನರು, ಅದರಲ್ಲೂ ವಿದ್ಯಾರ್ಥಿಗಳು ಎಂದು ಹೇಳಿದರು.
ವಿಶ್ವದಲ್ಲಿ ಅತೀ ಹೆಚ್ಚಿನ ಯುವ ಜನಾಂಗವಿರುವ ಭಾರತದಲ್ಲಿ ಇಂತಹ ಅಪಘಾತಗಳಿಂದ ಯುವ ಜನಾಂಗಕ್ಕಾಗುವ ಸಾವು, ನೋವುಗಳನ್ನು ತಡೆಗಟ್ಟಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಂ.ಐ.ಎಫ್.ಎಸ್.ಸಿಯು ಮೂರು ತಿಂಗಳ ಕಾಳದ ಬೃಹತ್ ಅರಿವು ಮೂಡಿಸುವ ಕಾರ್ಯಕ್ರಮ ಸರಣಿಯನ್ನು “ಸೇವ್ ಯುತ್ ಫ್ರಮ್ ಮಿಶೆಪ್” ಎಂಬ ಹೆಸರಿನಲ್ಲಿ ಆರಂಬಿಸಿದೆ ಇದರ ಅಂಗವಾಗಿ ಜಾಥಗಳನ್ನು, ಸ್ಲೋಗನ್, ಪೋಸ್ಟರ್ ರಚನಾ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಲಾಗುವುದು. ಎಂ.ಐ.ಎಫ್.ಎಸ್.ಸಿಯು ಸುರಕ್ಷತಾ ಪರಿಣಿತರ ತಂಡವೊಂದು ಎಲ್ಲಾ ಕಾಲೇಜುಗಳನ್ನು ಸಂದಶರ್ಿಸಿ ದಿನನಿತ್ಯ ಪಾಳಿಸಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂ.ಐ.ಎಫ್.ಎಸ್.ಸಿಯ ಚೇರ್ ಮೆನ್ ಅಂಡೋ ಪೌಲ್ ಹೇಳಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಎಸ್.ಪಿ. ಡಾ. ಎಸ್. ಸುಬ್ರಹ್ಮಣೇಶ್ವರ ರಾವ್ ವಹಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಅಗ್ನಿ ಶಾಮಕ ದಳದ ಅಧಿಕಾರಿ ವರದರಾಜನ್ ಭಾಗವಹಿಸಿದ್ದರು. ರಾಮಚಂದ್ರ ಭಟ್, ಪ್ರಾಚಾರ್ಯರು ಎಂ.ಐ.ಎಫ್.ಎಸ್.ಸಿ, ಅಂಡೋ ಪೌಲ್, ಎಂ.ಐ.ಎಫ್.ಎಸ್.ಸಿ ಚೇರ್ ಮೆನ್ ಸಭೆಯಲ್ಲಿ ಉಪಸ್ಥಿತಿದ್ದರು.
Click this button or press Ctrl+G to toggle between Kannada and English