ಮಂಗಳೂರು : ಇತೀಚೆಗೆ ಕರಾವಳಿಯಲ್ಲಿ ಗೋಕಳ್ಳತನ, ಗೋಹತ್ಯೆ, ಅಕ್ರಮ ಹಾಗೂ ಹಿಂಸಾತ್ಮಕ ಗೋಸಾಗಟ ತೀವ್ರಗೊಳ್ಳುವುದರಿಂದ ಅದನ್ನು ತಡೆಯಲು ಪೋಲಿಸ್ ಇಲಾಖೆ ಮತ್ತು ಸರಕಾರವನ್ನು ಎಚ್ಚರಿಸುವ ಸಲುವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಗಸ್ಟ್ 19 ರಂದು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಛೇರಿಯ ಎದುರು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು ದಿನೇಶ್ ಪೈಯವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು.
ಜನಜಾಗ್ರತಿ ಸಮಿತಿಯು ಅನ್ಯಾಯದ ವಿರುದ್ದ ಹೋರಾಡಿ ಜನಸಾಮಾನ್ಯರು ಸಂತೋಷದಿಂದ ಬದುಕುವಂತೆ ಮಾಡಲು ಉದ್ದೇಶಿಸಿದೆ. ಗೋಮಾತೆಯ ರಕ್ಷಣೆ ಹಾಗೂ ಗೋಮಾತೆಯನ್ನು ಸಾಕುವವರಿಗೆ ಬೆಂಬಲ ನೀಡುವುದೇ ಈ ಪ್ರತಿಭಟನೆಯ ಉದ್ದೇಶವಾಗಿದೆ.
ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೋಷ್ಟಿಯಲ್ಲಿ ವಿದ್ಯಾಧರ ಹೆಗ್ಡೆ, ಶರಣ್ ಪಂಪ್ವೆಲ್, ಜಗಧೀಶ್ ಶಣೇವ, ವಿಜಯ್ ಗೌಡ ಶಿಬ್ರಿಕೆರೆ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English