ನಗರದ ಎನ್.ಜಿ.ಒ. ಹಾಲ್ ನಲ್ಲಿ ಜೆ.ಆರ್.ಲೋಬೋರವರಿಂದ ಫಲಾನುಭಾವಿಗಳಿಗೆ ಪರಿಹಾರಧನ ವಿತರಣೆ

4:57 PM, Wednesday, August 14th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

ಮಂಗಳೂರು ; ರಾಷ್ಟೀಯ ಕುಟುಂಬ ಸಹಾಯಧನ ಯೋಜನೆಯ ಅಡಿಯಲ್ಲಿ 61 ಫಲಾನುಭಾವಿ ಕುಟುಂಬಗಳಿಗೆ ನಗರದ ಎನ್.ಜಿ.ಒ. ಹಾಲ್ ನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊರವರಿಂದ ಪರಿಹಾರಧನ ವಿತರಣಾ ಕಾರ್ಯಕ್ರಮ ಜರುಗಿತು.ಕಂದಾಯ ಇಲಾಖೆಯ ಅಧಿಕಾರಿಗಳು ಫಲಾನುಭಾವಿಗಳಿಗೆ ಬೇಗನೆ ಪರಿಹಾರ ದೊರಕುವಂತೆ ಅನುಕೂಲ ಮಾಡಿದಕ್ಕಾಗಿ ಕಂದಾಯ ಇಲಾಖೆಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಸಂತ್ರಸ್ತರಿಗೆ ಪರಿಹಾರ ಚಟುವಟಿಕೆಗಳು ಶೀಘ್ರದಲ್ಲಿ ನಡೆದು ಸಂತ್ರಸ್ತರಿಗೆ ನೆರವಾಗಲಿ ಎಂದು ಆಸಿಸುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ 61 ಫಲಾನುಭಾವಿಗಳಿಗೆ ತಲಾ 10,000ದಂತೆ ಮತ್ತು ಅತ್ತಾವರದಲ್ಲಿ ನೀರಲ್ಲಿ ಮುಳುಗಿ ಸತ್ತ ಮಹಿಳೆಯ ಕುಟುಂಬಕ್ಕೆ ರೂ.1,50,000 ಪರಿಹಾರಧನ ವಿತರಣೆ ಮಾಡಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English