ಮೂಡುಬಿದಿರೆ ವಿದ್ಯಾಗಿರಿಯಲ್ಲಿ 67ನೇ ಸ್ವಾತಂತ್ರ್ಯೋತ್ಸವ

4:27 PM, Friday, August 16th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

i-day-moodbidireಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವೇಳೆ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ಮಂದಿರದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ  ಹೂಗಳಿಂದ ಅಲಂಕೃತವಾದ ಧ್ವಜಸ್ತಂಭ ಮತ್ತೊಂದೆಡೆ ವೇದಿಕೆಯಲ್ಲಿ ಅದೇ ಬಣ್ಣದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಲು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಧ್ವಜಸ್ತಂಭದ ಬಳ್ಳಿಯನ್ನು ಎಳೆದು ತ್ರಿವರ್ಣ ಬಾವುಟ ಅರಳಿಸುತ್ತಿದ್ದಂತೆ ಆಳ್ವಾಸ್ ವಿದ್ಯಾರ್ಥಿಗಳಿಂದ ಕೋಟಿ ಕಂಠೋಂಸೆ ಎಂಬ ರಾಷ್ಟ್ರೀಯ ಭಾವೈಕ್ಯ ಗೀತೆ ಮೊಳಗಿತು.

ಆಳ್ವಾಸ್‌ನ  ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳು , ಸಾಂಸ್ಕೃತಿಕ ವಿದ್ಯಾರ್ಥಿ ತಂಡಗಳು, ಬ್ಯಾಂಡ್ ತಂಡಗಳು , ವಿದ್ಯಾರ್ಥಿ ಸಮುದಾಯದ ಮಧ್ಯೆ ತ್ರಿವರ್ಣಮಯ ಸಮವಸ್ತ್ರದಲ್ಲಿ ನಿಂತ ವಿದ್ಯಾರ್ಥಿಗಳು `ಆಳ್ವಾಸ್’ ಹೆಸರನ್ನು ಮೂಡಿಸಿದ್ದು ಕಣ್ಮನ ಸೆಳೆಯಿತು.
i-day-moodbidireಈ  ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಅಮರನಾಥ ಶೆಟ್ಟಿ, ಟ್ರಸ್ಟಿ ವಿವೇಕ ಆಳ್ವ, ಆಹ್ವಾನಿತರು, ಆಡಳಿತವರ್ಗ, ಪ್ರಾಚಾರ್ಯರು ,  ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಉಪಸ್ಡಿತರಿದ್ದರು.

18 ಸಾವಿರ ವಿದ್ಯಾರ್ಥಿಗಳು ಸೇರಿದಂತೆ 20 ಸಾವಿರ ಜನ ಈ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡರು.i-day-moodbidire

i-day-moodbidire

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English