ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕರಾವಳಿ ಉತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಸ್ಥಳೀಯರ ಅಭಿರುಚಿಯನ್ನು ಗಮನದಲ್ಲಿರಿಸಿ ಉತ್ಸವ ಅಚರಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಡಿಸೆಂಬರ್ 22 ರಿಂದ ಉತ್ಸವ ಆಚರಿಸಲು ಸಕಲ ಸಿದ್ಧತೆಗಳು ನಡೆಸಿರುವ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಕರಾವಳಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಸುಭೋದ್ ಯಾದವ್ ಅವರು ಪರಿಶೀಲಿಸಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಬಾರಿಯ ಕರಾವಳಿ ಉತ್ಸವವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲು ಒಪ್ಪಿಗೆ ಸೂಚಿಸಿದ್ದಾರೆ.ಕರಾವಳಿ ಉತ್ಸವವು ಕರಾವಳಿ ಉತ್ಸವ ವಸ್ತು ಪ್ರದರ್ಶನ ಮೈದಾನ, ಹಾಗೂ ಕದ್ರಿ ಉದ್ಯಾನದಲ್ಲಿ ಆಯೋಜಿಸಲಾಗಿದ್ದು, ಡಿಸೆಂಬರ್ 23 ರಿಂದ ಪ್ರತೀದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯ ವರೆಗೆ ಹೆಸರಾಂತ ಕಲಾವಿದರಿಂದ ಒಟ್ಟು 56 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದೇ ರೀತಿ 4 ವಾರಗಳ ಕಾಲ ವಾರದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಕದ್ರಿ ಉದ್ಯಾನವನದಲ್ಲಿಯೂ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಿದ್ಧತೆಗಳು ನಡೆದಿವೆಯೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ನಾಯಕ್ ಅವರು ಸಭೆಗೆ ಮಾಹಿತಿ ನೀಡಿದರು.
2011ನೇ ಜನವರಿ 23 ರಂದು ಬೀಚ್ನಲ್ಲಿ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಕರಾವಳಿ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲ ಅಕಾಡೆಮಿಗಳಿಗೂ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಕರಾವಳಿ ಉತ್ಸವ ಆಚರಣೆ ಪೂರ್ವಭಾವೀ ತಯಾರಿಗೆ ಸಾಕಷ್ಟು ಕಾಲಾವಕಾಶ ಬಳಸಿಕೊಂಡಿದ್ದು, ಉತ್ತಮವಾಗಿ ಯೋಜನೆ ರೂಪಿಸಿ ಉತ್ಸವ ಯಶಸ್ವಿಯಾಗಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಕರಾವಳಿ ಉತ್ಸವದಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆ ನೀಡುವಾಗ ಯಾವ ಲೋಪದೋಷಗಳಾಗದಂತೆ ಎಚ್ಚರ ವಹಿಸುವಂತೆ ಕರಾವಳಿ ಉತ್ಸವ ಸಾಂಸ್ಕೃತಿಕ ಸಮಿತಿ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.ಕರಾವಳಿ ಉತ್ಸವ ಅಂಗವಾಗಿ ಒಂದು ವಾರ ಕಾಲ ಯಕ್ಷಗಾನ ಉತ್ಸವವನ್ನು ಸಹ ಏರ್ಪಡಿಸಲು ತೀಮರ್ಾನಿಸಲಾಗಿದೆ. ಯಕ್ಷಗಾನ ಉತ್ಸವದಲ್ಲಿ ದ.ಕ.ಜಿಲ್ಲೆಯ ಆಯ್ದ 25 ಶಾಲೆಗಳ ಮಕ್ಕಳಿಂದ ಪುರಭವನದಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರ ತನಕ ಬಾಲಪ್ರತಿಭೆಗಳಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲು ಹಾಗೂ ಪ್ರತೀ ದಿನ 1000 ಶಾಲಾ ಮಕ್ಕಳು ವೀಕ್ಷಿಸಲು ಕಾರ್ಯಕ್ರಮ ರೂಪಿಸಲಾಗಿದೆಯೆಂದು ಯಕ್ಷಗಾನ ಅಕಾಡೆಮಿ ಸದಸ್ಯರು ತಿಳಿಸಿದರು.
ಕರಾವಳಿ ಉತ್ಸವದಂಗವಾಗಿ ಆಟೋಟ ಸ್ಪರ್ಧೆಗಳನ್ನು ಸಹ ಏರ್ಪಡಿಒಸಲು ತಿರ್ಮಾನಿಸಿದ್ದು ಪುಟ್ಬಾಲ್, ಬ್ಯಾಡ್ ಮಿಂಟನ್, ಕಬ್ಬಡಿ, ವೈಟ್ ಲಿಫ್ಟಿಂಗ್ ಹಾಗೂ ದೇಹ ದಾಡ್ರ್ಯ ಸ್ಪರ್ಧೆಗಳನ್ನು ಆಯೋಜಿಸಲು ಸಭೆಯಲ್ಲಿ ಚರ್ಚೆಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭಾಕರ ಶರ್ಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English