ಕಾನೂನಿನ ಅರಿವು ಪಂಚಾಯತ್ ಪ್ರತಿನಿಧಿಗಳಿಗೆ ಇರಬೇಕು: ನ್ಯಾ.ಮೂ ನಾಗಮೋಹನ್

3:58 PM, Saturday, November 13th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಕಾನೂನು ಅರಿವು ಕಾರ್ಯಗಾರಮಂಗಳೂರು: ದ.ಕ ಜಿಲ್ಲಾ ಪಂಚಾಯತ್ ಮತ್ತು ದ.ಕ ಜಿಲ್ಲಾ ಕಾನೂನು ಸೇವೆಗಳ  ಪ್ರಾಧಿಕಾರ ಇದರ ವತಿಯಿಂದ ಮಂಗಳೂರು ತಾಲೂಕಿನ ಗ್ರಾಮ ಪಂಚಾಯತ್ ಜಿನಪ್ರತಿನಿಧಿಗಳಿಗೆ ಕಾನೂನು ಅರಿವು ಕಾರ್ಯಗಾರವು ಇಂದು ಬೆಳಿಗ್ಗೆ ನಗರದ ಪುರಭವನದಲ್ಲಿ ನಡೆಯಿತು.

ಕಾನೂನು ಅರಿವು ಕಾರ್ಯಗಾರಕಾರ್ಯಗಾರದ ಉದ್ಘಾಟನೆಯನ್ನು  ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಎಚ್. ಎನ್ ನಾಗಮೋಹನ್ ದಾಸ್ ಇವರು ದೀಪ ಬೆಳಗಿಸುವುದರ ಮೂಲಕ ನೆರವೇದಿಸಿದರು. ಇದೇ ವೇಳೆ ಅವರು ರಚಿಸಿದ ಪುಸ್ತಕ “ಗ್ರಾಮ ರಾಜ್ಯ” (ಮಹಾತ್ಯಾ ಗಾಂಧಿಯವರ ಕಲ್ಪನೆ) ಇದರ ಬಿಡುಗಡೆಯನ್ನು ಸನ್ಮಾನ್ಯ ಶ್ರೀ  ಜಿ.ಎಸ್. ನಾರಾಯಣಸ್ವಾಮಿಯವರು ನೆರವೇರಿಸಿದರು.

ಕಾನೂನು ಅರಿವು ಕಾರ್ಯಗಾರಉದ್ಘಾಟನೆ ಬಳಿಕ ಮಾತನಾಡಿದ ನ್ಯಾಯಾಧೀಶರು ಕರ್ನಾಟಕದ ಮಂಗಳೂರಿನಲ್ಲಿ ನಡೆಯುವ ಈ ಕಾರ್ಯಗಾರವು ಗ್ರಾಮ ಪಂಚಾಯತ್ ನ ಜನಪ್ರತಿನಿಧಿಗಳಲ್ಲಿ ಹೆಚ್ಚು ಅರಿವು ಮೂಡಿಸಲಿ. ಸ್ವಾತಂತ್ರ್ಯ ಸಿಕ್ಕಿದ ನಂತರ ಉಂಟಾದ ಮುಖ್ಯ ಸಮಸ್ಯೆಯೆಂದರೆ ನಾಯಕತ್ವದ ಚಿಂತನೆ.  ಅದಕ್ಕೆ ಸಿಕ್ಕಿದ ಉತ್ತರ ಪ್ರಜೆಗಳೇ ಆಡಳಿತ ನಡೆಸುವ ಪ್ರಜಾಪ್ರಭುತ್ವವೆಂಬುದಾಗಿದೆ. ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರಕ್ಕೆ ಯಾವ ಹೆಸರು ಇಡಬೇಕೆಂಬ ಚಿಂತನೆಗೆ ಜಾತ್ಯಾತೀತ ರಾಷ್ಟ್ರ ಎಂಬ ಕೂಗು ಕೇಳಿ ಬಂತು. ಅಂದಿನ ಕಾಲದ ರಾಜ ಮಾಡುತ್ತಿದ್ದ ಕಾನೂನು ಈಗ ಪ್ರಜೆಗಳು ಮಾಡುತ್ತಿದ್ದಾರೆ. ರಾಜ್ಯದ 80,000 ಗ್ರಾಮ ಪಂಚಾಯತ್ನ ಸದಸ್ಯರು ಕೃಷಿ ಬಿಕ್ಕಟ್ಟು, ಮಹಿಳೆಯರ ಸಮಸ್ಯೆ, ಮೂಲಭೂತ ಸಮಸ್ಯೆಗಳ ಕಾನೂನು ಅರಿವು ತಿಳಿದಿರಬೇಕು, ಆಥರ್ಿಕ ಮತ್ತು ನೈತಿಕ ದಿವಾಳಿತನದಿಂದ ಸಂಸ್ಕೃತಿಯ ನಾಶವಾಗುತ್ತದೆ ಎಂದು ಅವರು ಹೇಳಿದರು.

ಕಾನೂನು ಅರಿವು ಕಾರ್ಯಗಾರಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಂತೋಷ್ ಕುಮಾರ್ ಭಂಡಾರಿ, ಅಧ್ಯಕ್ಷರು, ದ.ಕ ಜಿಲ್ಲಾ ಪಂಚಾಯತ್, ಮಂಗಳೂರು ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಡಾ. ಎಚ್.ಎನ್ ಕೃಷ್ಣ, ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರು ಬೆಂಗಳೂರು, ಸನ್ಮಾನ್ಯ ಶ್ರೀ ಸುಬೋಧ್ ಯಾದವ್ ಐ.ಎ.ಎಸ್, ಜಿಲ್ಲಾಧಿಕಾರಿ ಮಂಗಳೂರು, ಸನ್ಮಾನ್ಯ ಡಾ. ಕೆ. ವಿಜಯ ಪ್ರಕಾಶ್ ಆಯುಕ್ತರು ಮಹಾನಗರ ಪಾಲಿಕೆ, ಮಂಗಳೂರು, ಸನ್ಮಾನ್ಯ ಶ್ರೀ. ಎಸ್.ಪಿ ಚೆಂಗಪ್ಪ, ಅಧ್ಯಕ್ಷರು, ವಕೀಲರ ಸಂಘ, ಮಂಗಳೂರು, ಸನ್ಮಾನ್ಯ ಶ್ರೀ ಎಂ. ಎಸ್. ಕೋಟ್ಯಾನ್, ಅಧ್ಯಕ್ಷರು, ವಕೀಲರ ಸಂಘ, ಮೂಡಬಿದ್ರೆ. ಮೊದಲಾದವರು ಉಪಸ್ಥಿತರಿದ್ದರು.

ಕಾನೂನು ಅರಿವು ಕಾರ್ಯಗಾರಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮಂಜುಳಾ ಶೆಟ್ಟಿ, ಉಪನ್ಯಾಸಕಿ ಇವರು ನಡೆಸಿದರು. ಶ್ರೀ ಎಚ್. ಆರ್. ದೇಶಪಾಂಡೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಇವರು ಸ್ವಾಗತಿಸಿದರು. ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ವಂದನಾರ್ಪಣೆ ಗೈದರು.

ಕಾನೂನು ಅರಿವು ಕಾರ್ಯಗಾರ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English