ಕಾಸರಗೋಡು: ಮನೆಗೆ ಬೆಂಕಿ ಬಿದ್ದ ಪರಿಣಾಮ ಸೋಮವಾರ ತಡರಾತ್ರಿ ನಿದ್ದೆಯಲ್ಲಿದ್ದ ನಾಲ್ಕು ಮಂದಿ ಸಜೀವ ದಹನಗೊಂಡ ದುರ್ಘಟನೆ ಕಣ್ಣೂರಿನ ಚೆರುಪುಳದಲ್ಲಿ ನಡೆದಿದೆ. ಸುಟ್ಟು ಕರಕಲಾಗಿರುವ ನಾಲ್ಕು ಶವಗಳು ಕೋಣೆಯಲ್ಲಿ ಪತ್ತೆಯಾಗಿದೆ
ಈ ದುರ್ಘಟನೆಯಲ್ಲಿ ಸಾಜಿ (42), ಮತ್ತು ಸಿಂಧು(31) ಮತ್ತು ಅವರ ಮಕ್ಕಳಾದ ಅಧೀರಾ (10), ಮತ್ತು ಅತುಲ್ಯ(5) ಮೃತಪಟ್ಟಿದ್ದಾರೆ. ಮನೆಗೆ ಬೆಂಕಿ ಬಿದ್ದಿತ್ತೇ ಅಥವಾ ಇದು ಸಾಮೂಹಿಕ ಆತ್ಮಹತ್ಯೆಯೇ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಎಲ್ಲಾ ಶವಗಳು ಒಂದೇ ಕೋಣೆಯಲ್ಲಿ ಸಿಕ್ಕಿರುವ ಕಾರಣ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಕ್ಯಾನ್ಮ ಮತ್ತು ಸೀಮೆಎಣ್ಣೆ ಮನೆಯ ಹೊರಗಡೆ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Click this button or press Ctrl+G to toggle between Kannada and English