ಮಂಗಳೂರು : ಶಿವಭಾಗ್ ಪಬ್ಲಿಕ್ ವೆಲ್ಫೆರ್ ಸೊಸೈಟಿ ವತಿಯಿಂದ ಮಂಗಳೂರು ಕ್ಲೀನ್ ಆಂಡ್ ಗ್ರೀನ್ ಕ್ಯಾಂಪೇನ್ ಕಾರ್ಯಕ್ರಮವಾದ `ನಿರ್ಮಲ ಮಂಗಳೂರು ಅಭಿಯಾನಕ್ಕೆ ಗುರುವಾರ ಶಾಸಕ ಜೆ.ಆರ್.ಲೊಬೋ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಲೊಬೋ ಮನೆ, ಅಂಗಳ ಹಾಗೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳಬೇಕು. ಪ್ಲಾಸ್ಟಿಕ್ ಅಂತಹ ತಾಜ್ಯಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಜೈವಿಕ ತಾಜ್ಯಗಳನ್ನು ರಸಗೊಬ್ಬರಗಳಾಗಿ ಪರಿವರ್ತಿಸಬಹುದು. ಇದರಿಂದ ಪಚ್ಚನಾಡಿಯಲ್ಲಿ ಶೇಖರಣೆಯಾಗುವ ಕಸಗಳ ರಾಶಿಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಮಾಡಬಹುದು. ಸಾರ್ವಜನಿಕರ ಸಹಕಾರದಿಂದ ಮಾತ್ರ ನಗರವನ್ನು ಸ್ವಚ್ಚವಾಗಿಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿಪ್ಯಾರಾಮೌಂಟ್ ರಿಯಾಲಿಟಿ ಮತ್ತು ಇನ್ಫ್ರಾ ಸ್ಟ್ರಕ್ಚರ್ಸ್ ನಿರ್ದೇಶಕರಾದ ಲೂಯಿಸ್ ಲೋಬೋ ತಾಜ್ಯ ಬುಟ್ಟಿಯನ್ನು ವಿತರಿಸಿದರು.
ಕಾರ್ಪೊರೇಟರ್ಗಳಾದ ಸಬಿತ ಮಸ್ಕೀತ್, ನವೀನ್ ಡಿ ಸೋಜಾ, ಕಾಂಗ್ರಸ್ ನಾಯಕರಾದ ಜುಡಿತ್ ಮಸ್ಕರೇನಸ್, ಟಿ.ಕೆ.ಸುಧೀರ್, ನೆಲ್ಸನ್ ಮೊಂತೇರೋ, ಸಿರಿಲ್, ಮೋಹನ್ ಮೆಂಡನ್, ಜಯಕಾರ್, ಮತ್ತಿತ್ತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English