ಮೂಡುಬಿದರೆ: ಅಪ್ರಾಪ್ತ ಬುದ್ಧಿ ಮಾಂಧ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯನ್ನಾಗಿ ಮಾಢಿದ ಕೂಲಿ ಕಾರ್ಮಿಕನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಪ್ಪೆಪದವು ಗ್ರಾಮದ ಕಲ್ಲಾಡಿ ಜಾರಿಗೆಕಟ್ಟೆಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಕುಪ್ಪೆಪದವು-ಇರುವೈಲು ಗಡಿಭಾಗದಲ್ಲಿರುವ ಕಲ್ಲಾಡಿ ಜಾರಿಗೆಕಟ್ಟೆಯ ನಿವಾಸಿ, ಕಲ್ಲಾಡಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷನಾಗಿದ್ದ ಕೂಲಿ ಕಾರ್ಮಿಕ ದಲಿತ ವ್ಯಕ್ತಿ ಸುಂದರ್(55) ಎಂಬಾತ ತನ್ನ ಪಕ್ಕದಮನೆಯ 15 ಹರೆಯದ ಬುದ್ಧಿಮಾಂದ್ಯ ಹುಡುಗಿಯನ್ನು ತನ್ನ ಲೈಂಗಿಕ ತೃಷೆಗೆ ಬಳಸಿದ್ದಾನೆ. ಆರೋಪಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ . ಹುಡುಗಿಯ ತಂದೆ-ತಾಯಿ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದು ಆರೋಪಿಯ ಹೆಂಡತಿ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಈ ಸಮಯವನ್ನು ದುರುಪಯೋಗಪಡಿಸಿಕೊಂಡ ಸುಂದರ್ ಹುಡುಗಿಗೆ `ನಶ್ಯ’ಪುಡಿ ಕೊಡುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಇದರ ಪರಿಣಾಮ ಆಕೆ 4 ತಿಂಗಳ ಗರ್ಭಿಣಿಯಾಗಿದ್ದಾಳೆ.
ಸ್ಥಳೀಯರಿಗೆ ಈ ಕೃತ್ಯದ ಬಗ್ಗೆ ವಾರದ ಹಿಂದೆಯೇ ಸಂಶಯ, ಮಾಹಿತಿಯಿದ್ದು, ಗುರುವಾರ ವಿಚಾರಿಸಿದಾಗ ಆತ ನಿರಾಕರಿಸಿದ್ದನು. ಆದರೆ ಶುಕ್ರವಾರ ಅಪರಾಹ್ನ ಮಹಿಳೆಯರು ಸಹಿತ ಸ್ಥಳಿಯರು ವಿಚಾರಿಸಿದಾಗ ತಪ್ಪನ್ನು ಒಪ್ಪಿಕೊಂಡ ಈತನನ್ನು ತಕ್ಷಣ ಅಲ್ಲಿದ್ದವರು ಆತನನ್ನು ಮರವೊಂದಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಹೊಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಇಲ್ಲಿ ನಡೆದ ಕೋಮು ಗಲಭೆಗೂ ಕಾರಣನಾಗಿದ್ದ ಎನ್ನಲಾಗಿರುವ ಈತನ ಪೈಶಾಚಿಕ ಕೃತ್ಯಕ್ಕೆ ಕಠಿಣ ಶಿಕ್ಷೆಯಾಗಬೇಕೆಂದು ಊರಿನವರು ಆಗ್ರಹಿಸಿದ್ದಾರೆ.
ಆರೋಪಿ ಸುಂದರ್ನನ್ನು ಪೊಲೀಸರು ಬಂಧಿಸಿ ಕರೆದೊಯ್ದ ಬಳಿಕ ಸ್ಥಳಕ್ಕೆ ಆಟೋದಲ್ಲಿ ಬಂದ ಆತನ ತಮ್ಮ ಸದಾಶಿವ ಸ್ಥಳದಲ್ಲಿದ್ದ ಮಹಿಳೆಯರಿಗೆ ಹಾಗೂ ಯುವಕರಿಗೆ ಧಮ್ಕಿ ಆಗಿದ್ದಾನೆ. ತಕ್ಷಣ ಒಟ್ಟು ಸೇರಿದ ಯುವಕರು ಆತನಿಗೆ ಹೊಡೆಯಲು ಮುಂದಾದ ವೇಳೆಗೆ ಅಲ್ಲಿ ಕೆಲ ಕಾಲ ಉಧ್ವಿಗ್ನ ಪರಿಸ್ಥಿತಿ ನಿರ್ಮಣವಾಗಿತ್ತು. ಸಧ್ಯ ಹುಡುಗಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.
Click this button or press Ctrl+G to toggle between Kannada and English