ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಹರ್ಷಿತಾ ಮುಗ್ದುಂ

5:33 PM, Monday, November 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿಬೆಂಗಳೂರು : ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಸಾಧಿಸುವ ಛಲ ಇದ್ದರೆ ಎಂತಹ ಮಹಾನ್ ಸಾಧನೆಯನ್ನೂ ಎಳೆಯ ಹರೆಯದಲ್ಲೇ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಬೆಂಗಳೂರಿನ ಬಾಲಕಿ ಹರ್ಷಿತಾ ಮುಗ್ದುಂ. ಏಳನೇ ತರಗತಿಯಲ್ಲಿ ಓದುತ್ತಿರುವ ಈಕೆ “ರೂಬಿ ರಷ್” ಹೆಸರಿನ ಇಂಗ್ಲಿಷ್ ಕಾದಂಬರಿ ಬರೆದು ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿಯಲಹಂಕದ ಡಿಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿರುವ ಹರ್ಷಿತಾಗೆ ಈಗ 12 ವರ್ಷ. ಪುಸ್ತಕವೇ ಈಕೆಯ ಪ್ರಾಣ. ತನ್ನ ಬಳಿ ಸ್ವಂತ ಕಿರು ಗ್ರಂಥಾಲಯವನ್ನೇ ಇಟ್ಟುಕೊಂಡಿದ್ದಾಳೆ. ವಾರಕ್ಕೆ ಕನಿಷ್ಠ ಎರಡು ಕಾದಂಬರಿಗಳನ್ನು ಓದುತ್ತಾಳೆ. ಪುಸ್ತಕ ಮೇಲಿನ ಪ್ರೀತಿ ಈಕೆಯನ್ನು ಬರೆಯುವಂತೆಯೂ ಪ್ರೇರೇಪಿಸಿದೆ. ಅದರ ಫಲವಾಗಿಯೇ ಈ ಪುಟಾಣಿ ಅದ್ಭುತ ಪ್ರತಿಭೆಯಿಂದ ‘ರೂಬಿ ರಷ್’ ವೈಜ್ಞಾನಿಕ ಕಾದಂಬರಿ ಹೊರಬಂದಿದೆ.

ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿಹರ್ಷಿತಾ ಇನ್ನೂ ಬ್ರಿಟನ್ಗೆ ಹೋಗಿಲ್ಲ, ಆದರೆ ಈಕೆಯ ಕಾದಂಬರಿಯ ಕಥಾನಕ ಇರುವುದು ಅಲ್ಲಿ. ಜೀವವಿಲ್ಲದ ವಸ್ತುವೊಂದಕ್ಕೆ ವಿಜ್ಞಾನಿಯೊಬ್ಬ ಜೀವ ತುಂಬುವ ಕುತೂಹಲದ ಕತೆಯನ್ನು ಹೆಣೆಯಲಾಗಿದೆ. ಆ ವಸ್ತು ಬಳಿಕ ಕಣ್ಮರೆಯಾಗುತ್ತದೆ. ಬಳಿಕ ಅದನ್ನು ವಾಪಸ್ ಪಡೆಯಲು ಭಾರಿ ಸಾಹಸವನ್ನೇ ಮಾಡಬೇಕಾಗುತ್ತದೆ. ವಿಜ್ಞಾನವು ವಸ್ತುವೊಂದಕ್ಕೆ ಜೀವ ನೀಡಲಾರದು, ಒಂದು ವೇಳೆ ಅದರಲ್ಲಿ ಸಫಲವಾದರೂ ಅದನ್ನು ದುರ್ಬಳಕೆ ಮಾಡುವುದು ನಿಶ್ಚತ ಎಂಬ ಒಟ್ಟಾರೆ ಸಂದೇಶವನ್ನು ಈ ಕಾದಂಬರಿ ನೀಡುತ್ತದೆ.
ತನ್ನ ತಾಯಿ ಶಿವಾನಿ ಮಗ್ದುಂ ಮತ್ತು ಸ್ಟೀಫನ್ ಮೇಯರ್ ಅವರಂತಹ ಸಾಹಿತಿಗಳಿಂದ ಪ್ರಭಾವಿತರಾಗಿರುವ ಹರ್ಷಿತಾ ಅವರು ಒಂದು ವರ್ಷದಲ್ಲಿ ಈ ಕಾದಂಬರಿ ಬರೆದು ಮುಗಿಸಿದ್ದಾರೆ.
ತಾನು ಸಾಹಿತಿ ಆಗಬೇಕು ಎಂಬ ಮಹತ್ವಾಕಾಂಕ್ಷೆಯೇನೂ ಹಷರ್ಿತಾಗೆ ಇಲ್ಲ. ಖಗೋಳ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಬಯಕೆ ಈಕೆಯದ್ದು. ಸಾಹಿತ್ಯ ಬರವಣಿಗೆ ಈಕೆಯ ವಿದ್ಯಾಭ್ಯಾಸಕ್ಕೆ ಅಡ್ಡಿ ಉಂಟುಮಾಡಿಲ್ಲ. ತನ್ನ ಬಿಡುವಿನ ಸಮಯದಲ್ಲಿ ಮಾತ್ರ ಸಾಹಿತ್ಯ ಕೃಷಿಯಲ್ಲಿ ಈಕೆ ತೊಡಗಿಸಿಕೊಳ್ಳುತ್ತಾಳೆ.
ಹರ್ಷಿತಾಳ ರಚನಾತ್ಮಕ ಹವ್ಯಾಸ ಮತ್ತು ಸಾಹಿತ್ಯ ಚಿಂತನೆಗಳ ಬಗ್ಗೆ ಈಕೆಯ ವೆಬ್ಸೈಟ್ನಲ್ಲಿ ನೋಡಬಹುದು.
ತಿತಿತಿ.ಚಿಡಿಣಚಿಟಚಿರಜಣಟ.ಟಿಜಣ
ಹರ್ಷಿತಾಳ ಎರಡನೇ ಕಾದಂಬರಿ 300 ಪುಟಗಳ “ಡೆಸ್ಪರೇಟ್” ಮುಕ್ತಾಯದ ಹಂತದಲ್ಲಿದೆ. ಈಕೆ ಕೆಲವು ಕವನಗಳನ್ನೂ ಬರೆದಿದ್ದಾಳೆ. ಸಿಬಿಐ ಅಧಿಕಾರಿಯಾಗಿರವ ಹಷರ್ಿತಾಳ ತಂದೆ ಈಕೆಯ ಸಾಹಿತ್ಯ ಕೃಷಿಗೆ ಆಸರೆಯಾಗಿ ಮತ್ತು ಉತ್ತೇಜಕರಾಗಿ ನಿಂತಿದ್ದಾರೆ.
“ಅಭಿನವ” ಪ್ರಕಾಶನವು ಈಗಾಗಲೇ ಸುಮಾರು 196 ಪುಸ್ತಕಗಳನ್ನು ಪ್ರಕಾಶಿಸಿದೆ. ಡಾ. ಯು. ಆರ್. ಅನಂತಮೂರ್ತಿ, ಶ್ರೀ ಕೆ. ವಿ. ಸುಬ್ಬಣ್ಣ, ಶ್ರೀ ಎಚ್. ಎಸ್. ಶಿವಪ್ರಕಾಶ್, ಶ್ರೀ ಪ್ರಭುಶಂಕರ್, ಶ್ರೀ ರವಿ ಬೆಳೆಗೆರೆ, ಶ್ರೀ ಎಚ್. ವೈ. ಶಾರದಾ ಪ್ರಸಾದ್, ಶ್ರೀ ಕೆ. ಜಿ. ಸುಬ್ರಹ್ಮಣ್ಯ ಮೊದಲಾದ ಗಣ್ಯರ ಪುಸ್ತಕಗಳನ್ನು ಪ್ರಕಾಶಿಸಿದ ಹೆಗ್ಗಳಿಕೆ ಈ ಪ್ರಕಾಶನ ಸಂಸ್ಥೆಯದ್ದು.
ಅಭಿನವ ಪ್ರಕಾಶನದ ಅಂಗಸಂಸ್ಥೆಯಾಗಿರುವ “ರುವಾರಿ”ಯು ಈಗಾಗಲೇ ಖ್ಯಾತ ಇತಿಹಾಸಜ್ಞ ಪ್ರೊ. ಸೆಟ್ಟರ್, ಕಾದಂಬರಿಕಾರ ಮನೋಹರ ಮಳಗಾಂವ್ಕರ ಮೊದಲಾದವರ ಕೃತಿಗಳನ್ನು ಪ್ರಕಾಶಿಸಿದೆ.
ದೇಶದ ಅತ್ಯಂತ ಕಿರಿಯ ಕಾದಂಬರಿಕಾರ್ತಿ ಹರ್ಷಿತಾ ಅವರ “ರೂಬಿ ರಷ್’ ಕಾದಂಬರಿಯನ್ನು ಪ್ರಕಾಶಿಸಲು “ರೂವಾರಿ” ಸಂತಸಪಡುತ್ತದೆ. ದೇಶದ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ವಿದೇಶಗಳಲ್ಲಿ ಈ ಕಾದಂಬರಿ ದೊರಕಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English