ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ಬುಧವಾರ ನಡೆಯಿತು.
ನಂದ ಗೋಕುಲ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಕಂದಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ,ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಮತ್ತಿತರ ಮಕ್ಕಳ ಕೃಷ್ಣ ವೇಷ ಸ್ಪರ್ಧೆ 18 ವಿಭಾಗಗಳಲ್ಲಿ ಮತ್ತು ಶ್ರೀ ಕೃಷ್ಣ ರಸಪ್ರಶ್ನೆ, ಛಾಯಾ ಕೃಷ್ಣ ಸ್ಪರ್ಧೆ, ಬಾಲಕೃಷ್ಣ ರಸ ಪ್ರಶ್ನೆ ಸ್ಪರ್ಧೆಯೂ ನಡೆಯಿತು.
ಮೂರು ತಿಂಗಳ ಮಗುವಿನಿಂದ ಆರಂಭವಾಗಿ 7ನೇ ತರಗತಿಗೂ ಮೇಲ್ಪಟ್ಟ ವಿದ್ಯಾರ್ಥಿಗಳು ಶ್ರೀ ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೃಷ್ಣನ ಲೀಲೆಗಳ ಸನ್ನಿವೇಶಗಳನ್ನು ಹಲವು ವಿಭಾಗಗಳಲ್ಲಿ ಮಕ್ಕಳು ಮಾಡಿತೋರಿಸಿದರು.
ಈ ಕಾರ್ಯ ಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಸ್ಪರ್ಧೆ ಉದ್ಘಾಟಿಸಿದರು. ಎ.ಜೆ. ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರಿ ಶ್ರೀಪತಿ ಭಟ್, ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್, ಶಶಿಧರ ಹೆಗ್ಡೆ, ಕೆ.ಎಸ್. ಕಲ್ಲೂರಾಯ, ಹರಿನಾಥ್ ಜೋಗಿ, ದಿನೇಶ್ ದೇವಾಡಿಗ, ಅಶೋಕ್ ದೇವಾಡಿಗ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಕಿರಣ್ ಜೋಗಿ, ವಿಜಯಲಕ್ಷ್ಮೀ ಶೆಟ್ಟಿ, ಕದ್ರಿ ನವನೀತ್ ಶೆಟ್ಟಿ, ಸುಧಾಕರ ರಾವ್ ಪೇಜಾವರ ಮತ್ತಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English